Header Ads
Header Ads
Breaking News

ಜ್ವರದಿಂದ ಬಳಲುತ್ತಿದ್ದ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ನಿಧನ

ಮಂಜೇಶ್ವರ ಶಾಸಕ ಪಿ. ಬಿ ಅಬ್ದುಲ್ ರಜಾಕ್ ಇಂದು ಮುಂಜಾನೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 63 ವರ್ಷ ವಯಸ್ಸಾಗಿತ್ತು. ಅಸೌಖ್ಯ ದ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.2011 ರಿಂದ ಮಂಜೇಶ್ವರ ಶಾಸಕರಾಗಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಮುಸ್ಲಿಂ ಲೀಗ್ ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದರು.2011 ರಲ್ಲಿ ಮೊದಲ ಬಾರಿ ಮಂಜೇಶ್ವರದಿಂದ ಶಾಸಕರಾಗಿ ಆಯ್ಕೆ , 2016 ರಲ್ಲಿ ಎರಡನೇ ಬಾರಿ ಬಿಜೆಪಿ ಅಭ್ಯರ್ಥಿ ಕೆ . ಸುರೇಂದ್ರನ್ ವಿರುದ್ಧ89 ಮತಗಳ ಅಂತದಿಂದ ಗೆಲುವು ಸಾಧಿಸಿ ಎರಡನೇ ಬಾರೀ ಕೇರಳ ವಿಧಾನ ಸಭೆಗೆ ಆಯ್ಕೆಯಾದರು . ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪಾರ್ಥಿವ ಶರೀರವನ್ನು ನಾಯಮ್ಮರ ಮೂಲೆಯಲ್ಲಿರುವ ಸ್ವಗ್ರಹಕ್ಕೆ ತರಲಾಗಿದ್ದು, ಅಂತಿಮ ದರ್ಶನ ಪಡೆಯಲು ಜನಪ್ರವಾಹವೇ ಹರಿದು ಬರುತ್ತಿದೆ. ಸಂಜೆ ಆರು ಗಂಟೆಗೆ ಆಲಂಪಾಡಿ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.2011 ರಲ್ಲಿ ಸಿಪಿಎಂ ನ ಸಿ . ಎಚ್ ಕುಞ೦ಬು ರವರನ್ನು5828 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು2016ರಲ್ಲಿ ಎರಡನೇ ಬಾರೀ ಪ್ರಬಲ ಪೈಪೋಟಿಯಲ್ಲಿ ಬಿಜೆಪಿಯ ಕೆ . ಸುರೇಂದ್ರನ್ ರವರನ್ನು ಕೇವಲ 89 ಮತಗಳ ಅಂತರದಿಂದಸೋಲಿಸಿದರು. ವಿಧಾನಭೆಯಲ್ಲಿ ಕನ್ನಡಿಗರ ಧ್ವನಿ ಎತ್ತಿದ ಮಾತ್ರವಲ್ಲ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಶಾಸಕರಾಗಿದ್ದಾರೆ ಅಬ್ದುಲ್ ರಜಾಕ್.ಸರಳ ಸ್ವಭಾವದವಾಗಿದ್ದ ಅವರು ಪಕ್ಷ , ಜಾತಿ ಬೇಧವಿಲ್ಲದೆ ಎಲ್ಲರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ , ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದರು.ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ, ಕಾಸರಗೋಡು ಸಂಯುಕ್ತ ಜಮಾಅತ್ ಕಾರ್ಯಾಧ್ಯಕ್ಷ, ನೆಲ್ಲಿಕ್ಕಟ್ಟ, ನೀರ್ಚಾಲ್ ಜಮಾಅತ್ ಅಧ್ಯಕ್ಷ, ಆಲಂಪ್ಪಾಡಿ ನೂರುಲ್ ಇಸ್ಲಾಮಿಕ್ ಯತೀಂಖಾನ ಉಪಾಧ್ಯಕ್ಷರಾಗಿಯೂ ಪಿಬಿ ಅಬ್ದುಲ್‌ರಝಾಕ್ ಸೇವೆ ಸಲ್ಲಿಸಿದ್ದ ರು

Related posts

Leave a Reply