Header Ads
Header Ads
Breaking News

ಜ.10 ಮತ್ತು 11ರಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ ನ್ಯಾನೋ ತಂತ್ರಜ್ಞಾನ ಸಮಾವೇಶ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದವರು ನ್ಯಾನೋ ತಂತ್ರಜ್ಞಾನ-2019 ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳವನ್ನು ಆಯೋಜಿಸಿದ್ದಾರೆ.
ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂತ ಅಲೋಶಿಯಸ್ ಕಾಲೇಜಿನ ಅಸೋಸಿಯೇಟ್ ಪ್ರೊಪೆಸರ್ ರಿಚರ್ಡ್ ಗೊನ್ಸಾಲ್ವಿಸ್ ಅವರು, ಎರಡು ದಿನದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮಾವೇಶವು ಜನವರಿ 10 ಮತ್ತು 11ರಂದು ನಡೆಯಲಿದೆ. ಸಮಾವೇಶದ ಉದ್ಘಾಟನೆಯು ಜನವರಿ 10ರಂದು ಕಾಲೇಜಿನ ಎಲ್‌ಎಫ್ ರಸ್ಕೀನ್ಹ ಸಭಾಂಗಣದಲ್ಲಿ ನಡೆಯಲಿದ. ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕರಾದ ಪ್ರೊ. ಕರಣಮ್ ಉಮಾಮಹೇಶ್ವರ ರಾವ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಆನಂತರ ಮಾತನಾಡಿದ ಸಮಾವೇಶದ ಸಂಚಾಲಕರಾದ ಡಾ. ರೊನಾಲ್ಡ್ ನಝರತ್ ಅವರು ಮಾಹಿತಿ ನೀಡಿ ಈ ಸಮ್ಮೇಳನಕ್ಕೆ ಖ್ಯಾತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ವಾಂಸರು ನ್ಯಾನೋತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗಿನ ಒಲವುಗಳ ಮತ್ತು ಸಾಧನೆಗಳ ಬಗ್ಗೆ ಈ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಬೆಲ್ಜಿಯಂನ ನಮೂರು ವಿವಿಯ ಡಾ. ಸೈಮನ್ ಡೆಟ್ರಿಚೆ, ಅರವಿಂದ್ ಕೆ. ಭಕ್ತ, ಸೆಬಾಸ್ಟಿಯನ್ ವಿವೆಗ್ನಿಸ್, ಎನ್‌ಐಟಿ ಕೆ ಸುರತ್ಕಲ್‌ನ ಡಾ. ಅರುಣ್ ಇಸ್ಲೂರು, ಸ್ಕಾಟ್ ಲ್ಯಾಂಡ್‌ನ ಎಡಿನ್ ಬರೋ ವಿವಿಯ ಡಾ. ಡೇನಿಕಾ ಪಿಂಟೋ, ಮೊದಲಾದ ವಿದ್ವಾಂಸರು ಈ ಎರಡು ದಿನಗಳ ಸಮಾವೇಶದಲ್ಲಿ ಉಪಾನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ಸಮಾವೇಶದ ಸಂಚಾಲಕರು, ಉಪನ್ಯಾಸಕರು ಉಪಸ್ಥಿತರಿದ್ದರು.

Related posts

Leave a Reply