Header Ads
Header Ads
Breaking News

ಜ.13ರಂದು ಕುಂದಾಪುರದಲ್ಲಿ ಇನಿದನಿ ಸಂಗೀತ ರಸಸಂಜೆ

ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಆಯೋಜನೆಯಲ್ಲಿ ಇನಿದನಿ ಸಂಗೀತ ರಸಸಂಜೆ ಕಾರ್ಯಕ್ರಮ ಜ. 13ರಂದು ಸಂಜೆ 6 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ. ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್, ಇನಿದನಿಯಲ್ಲಿ ಪ್ರಮುಖ ಆಕರ್ಷಣೆಯಾಗಿ ಖ್ಯಾತ ಗಾಯಕ ಅಜೇಯ್ ವಾರಿಯರ್, ಕನ್ನಡ ಕೋಗಿಲೆ ಖ್ಯಾತಿಯ ಬೆಂಗಳೂರಿನ ಶ್ರುತಿ ಭಿಡೆ, ತೀರ್ಥಹಳ್ಳಿಯ ದಿವ್ಯ ರಾಮಚಂದ್ರ ಹಾಗೂ ಹಿಮ್ಮೇಳದಲ್ಲಿ ಮಂಗಳೂರಿನ ರಾಜ್‌ಗೋಪಾಲ್ ತಂಡ ನೇತೃತ್ವ ವಹಿಸಲಿದ್ದು, ಶಿವಮೊಗ್ಗದ ದೀಪಕ್, ಕೇರಳದ ಸಿಜಿ ಮೋಹನ್, ಜಯಪ್ರಕಾಶ್ ಮತ್ತಿತರ 25ಮಂದಿಯ ಕಲಾವಿದರ ತಂಡ ಭಾಗವಹಿಸಲಿದೆ ಎಂದರು.
ಗಣೇಶ್ ಕ್ಯಾಶ್ಯೂ ಬೆಳ್ವೆ ಹಾಗೂ ನಂದಿನಿ ಹೋಟೆಲ್‌ನ ಸಹಭಾಗಿತ್ವದಲ್ಲಿ ಈ ಭಾಗದ ಉದ್ಯಮಿಗಳು, ಕೈಗಾರಿಕಾ ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಸಂಗೀತಸಾಕ್ತರ ಸಹಕಾರದೊಂದಿಗೆ ನಡೆಯುವ ಈ ಸಂಗೀತ ಸಂಜೆಯಲ್ಲಿ 70-80೦ ರ ದಶಕದ ಕಾಡುವ ಮಧುರ ಗೀತೆಗಳ ಗಾಯನವನ್ನು ಕೇಳುವ ಅವಕಾಶವಿದೆ ಎಂದು ಕಿಶೋರ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಾಕ್ಷೇತ್ರ ಕುಂದಾಪುರದ ಉಪಾಧ್ಯಕ್ಷರಾದ ಕೆ.ಆರ್. ನಾಯಕ್, ಪ್ರವೀಣ್ ಟಿ., ಸದಸ್ಯ ಸಾಯಿನಾಥ್, ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯ ಗಿರೀಶ್ ಜಿ.ಕೆ. ಉಪಸ್ಥಿತರಿದ್ದರು.

Related posts

Leave a Reply