Header Ads
Header Ads
Breaking News

ಜ.13ರಂದು ಮಂಗಳೂರಿನ ಅಂತರ ಶಾಲಾ ಮಟ್ಟದ ಸ್ಪೀಚ್ ಕಾಂಟೆಸ್ಟ್

ಕ್ರೆಸೆಂಡೋ-2019 ಅಂತರ ಶಾಲಾ ಮಟ್ಟದ ಸ್ಪೀಚ್ ಕಾಂಟೆಸ್ಟ್ ಸ್ಪರ್ಧೆಯು ಜನವರಿ 13ರಂದು ಮಂಗಳೂರಿನ ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಸ್ಕೂಲ್ ನಲ್ಲಿ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕೃಷ್ಣ ಪ್ರಸಾದ್ ಅಡಪ ತಿಳಿಸಿದರು.

ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಅವರು, ಅಕೋಲೆಡ್ಸ್ ಅಕಾಡೆಮಿ ಇಂಟರ್ ಸ್ಕೂಲ್ ಮತ್ತು ಎಕ್ಸ್‌ಟೆಂಪೊರ್ ಸ್ಪೀಚ್ ಕಾಂಟೆಸ್ಟ್‌ನ್ನು ಹಮ್ಮಿಕೊಂಡಿದ್ದೇವೆ. ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲು ಉದ್ದೇಶಿಸಿದ್ದೇವೆ ಎಂದ ಅವರು, ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಿ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸಂಜನಾ ಅಡಪ ಉಪಸ್ಥಿತರಿದ್ದರು.

Related posts

Leave a Reply