Header Ads
Header Ads
Breaking News

ಜ.14ರಿಂದ 22ರ ವರೆಗೆ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೋತ್ಸವ ಜ.14ರಂದು ಧ್ವಜಾರೋಹಣಗೊಂಡು ಜ.22ರವರೆಗೆ ವಿವಿಧ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ನಾನಾ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ವಿಶೇಷವಾಗಿ ಜ.14ರಂದು ಹೊರೆಕಾಣಿಕೆ, ಭಜನೆ ಉಲ್ಪೆ ಮೆರವಣಿಗೆ ಆಗಮಿಸಲಿದೆ. ಜಾತ್ರೆಯ ಪ್ರತಿದಿನವೂ ಸಂಜೆ ಗಂಟೆ 5.30ರಿಂದ 7 ಗಂಟೆವರೆಗೆ ಭಜನ ಮಂಡಳಿಯಿಂದ ಭಜನೆ ನೆರವೇರಲಿದೆ ಎಂದು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ತಿಳಿಸಿದರು.

ಅವರು ವಿಟ್ಲ ಪ್ರೆಸ್ ಕ್ಲಬ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜ.14ರಂದು 10 ಗಂಟೆಗೆ ಧ್ವಜಾರೋಹಣ ನೆರವೇರಿ, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನ ಪರಿಷತ್ತಿನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಒಡಿಯೂರು ಶ್ರೀ, ಮಾಣಿಲ ಶ್ರೀ, ಬಾಳೆಕೋಡಿ ಶ್ರೀ ಮತ್ತು ಕಣಿಯೂರು ಶ್ರೀಗಳ ಉಪಸ್ಥಿತಿಯಲ್ಲಿ ಜ.14ರಂದು ಅರ್ಧ ಏಕಾಹ ಭಜನೆ ನಡೆಯಲಿದೆ.
ಜ.20ರಂದು ಬೆಳಗ್ಗೆ 5ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 9ಕ್ಕೆ ಹೂತೇರು ನಡೆಯಲಿದೆ. ಜ. 21ರಂದು ಬೆಳಗ್ಗೆ ದರ್ಶನ ಬಲಿ, ರಾಜಾಂಗಣದ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 7.30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರುವುದು, ರಾತ್ರಿ 8ಕ್ಕೆ ಮಹಾ ರಥೋತ್ಸವ, ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಟ್ಲ ಪ.ಪಂ.ಅಧ್ಯಕ್ಷ ಅರುಣ್ ಎಂ.ವಿಟ್ಲ, ಸದಸ್ಯ ವಿ.ರಾಮದಾಸ ಶೆಣೈ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ರಮಾನಾಥ ವಿಟ್ಲ, ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಭಜನ ಪರಿಷತ್ ಅಧ್ಯಕ್ಷ ದಿನೇಶ್ ಮಾಮೇಶ್ವರ, ವಿಟ್ಲ ಸೀಮೆ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನ ಪರಿಷತ್ ಉಪಾಧ್ಯಕ್ಷ ಶೀನಪ್ಪ ನಾಯ್ಕ, ಜಯರಾಮ ಕುಂಟ್ರಕಳ ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply