Header Ads
Breaking News

ಜ.14,15,16ರಂದು ಬಾಲ ಏಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

ಮಂಗಳೂರಿನ ಕಾರ್ಮೆಲ್‍ಹಿಲ್ ಬಿಕರ್ನಕಟ್ಟೆಯಲ್ಲಿರುವ ಬಾಲ ಏಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಜ.14,15 ಮತ್ತು 16ರಂದು ವಿಜ್ರಂಭಣೆಯಿಂದ ನಡೆಯಲಿದೆ ಎಂದು ಬಾಲಯೇಸುವಿನ ಪುಣ್ಯಕ್ಷೇತ್ರದ ಮುಖ್ಯಸ್ಥರಾದ ವಂದನೀಯ ಫಾ. ವಿಲ್ಫ್ರೇಡ್ ರೊಡಿಗಸ್ ಹೇಳಿದ್ರು.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜನವರಿ 14ರಂದು ಬೆಳಗ್ಗೆ 10.30ಕ್ಕೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆ ನಡೆಯಲಿದೆ. ಇನ್ನು ಈ ವಾರ್ಷಿಕ ಮಹೋತ್ಸವಕ್ಕೆ ಜ.4ರಂದು ವಿದ್ಯಕ್ತ ಚಾಲನೆ ನಡೆಯಲಿದೆ. ಬಳಿಕ ಸಂಜೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಅಂತ ಹೇಳಿದ್ರು. ಇನ್ನು ಈ ವಾರ್ಷಿಕೋತ್ಸವದ ಪ್ರಯುಕ್ತ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ಬಾಲಯೇಸು ಸಭಾಭವನದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ಗಂಟೆಯವರೆಗೆ ರಕತ್ದಾನ ಶಿಬಿರವನ್ನು ಕೂಡಾ ಹಮ್ಮಿಕೊಳ್ಳಲಾಗಿದೆ ಅಂತ ಹೇಳಿದ್ರು.

ಈ ಸಂದರ್ಭ ಬಾಲಯೇಸು ಪುಣ್ಯ ಕ್ಷೇತ್ರದ ನಿರ್ದೇಶಕರಾದ ವಂ.ಫಾ ಪ್ರಕಾಶ್ ಡಿಕುನ್ಹಾ, ಫೋರ್ ವಿಂಡ್ಸ್ ಕಮ್ಯುನಿಕೇಶನ್ಸ್‍ನ ನಿರ್ದೇಶಕರಾದ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *