Header Ads
Breaking News

ಜ.17ರಂದು ಕೆರೆಕಾಡು ವಿನಾಯಕ ಮೇಳದ ಯಕ್ಷಕಲೋತ್ಸವ

ಕೆರೆಕಾಡು ವಿನಾಯಕ ಮೇಳದ 12ನೇ ವರ್ಷದ ಯಕ್ಷಕಲೋತ್ಸವವು ಜ.17ರಂದು ಎಸ್.ಕೋಡಿ ಬಳಿಯ ರೋಹನ್ ಎಸ್ಟೇಟ್ ಷಣ್ಮುಖ ನಗರದಲ್ಲಿ ನಡೆಯಲಿದೆ ಎಂದು ಮೇಳದ ಅಧ್ಯಕ್ಷ ಜಯಂತ್ ಅಮೀನ್ ತಿಳಿಸಿದ್ದಾರೆ.ಅವರು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 12ನೇ ವರ್ಷದ ಯಕ್ಷಕಲೋತ್ಸವವು ಜ.17ರಂದು ನಡೆಯಲಿದ್ದು, ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ವಿನಾಯಕ ಯಕ್ಷ ಕಲೋತ್ಸವದ 2021ನೇ ಸಾಲಿನ ಪ್ರಶಸ್ತಿ ಪುರಸ್ಕøತರಾದ ರಾಜಾರಾಮ್ ಕುಂದಾಪುರ, ಜಿತೇಂದ್ರ ಕೊಟ್ಟಾರಿ, ನರೇಂದ್ರ ಕೆರೆಕಾಡು ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದರು. ಸುದ್ದಿಗೋಷ್ಟಿಯಲ್ಲಿ ಉಮೇಶ್ ಆಚಾರ್ಯ, ಅಜಿತ್‍ಕುಮಾರ್, ಅಭಿಜಿತ್, ಅಶೋಕ್, ಅಜಿತ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *