Header Ads
Header Ads
Breaking News

ಜ.22 ರಿಂದ ಫೆ.3ರವರೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಉಳ್ಳಾಲ: ಆರಾಧನೆ ಉಪಾಸನೆ ಜತೆಯಾಗಿರುವ ಬ್ರಹ್ಮಕಲಶೋತ್ಸವ ಉತ್ಸವ ನಡೆಯುವುದು ತೀರಾ ಕಡಿಮೆ. ಆದರೆ ಈ ಬಾರಿ ಕಟೀಲಿನಲ್ಲಿ ಎಲ್ಲಾ ವರ್ಗ, ಜಾತಿ ಬಾಂಧವರು ಒಗ್ಗಟ್ಟಾಗಿ ಬ್ರಹ್ಮಕಲಶೋತ್ಸವ ನಡೆಸುವ ಮುಖೇನ ಆರಾಧನೆ ಮತ್ತು ಉಪಾಸನೆಯ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದು ಕಟೀಲು ಕ್ಷೇತ್ರದ ಪ್ರಮುಖರಾದ ಕಮಲಾದೇವಿ ಆಸ್ರಣ್ಣ ಅಭಿಪ್ರಾಯ ಪಟ್ಟರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಲ್ಲಿ ಜ.22 ರಿಂದ ಫೆ.3 ರ ಪಯರ್ಂತ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಹೊರೆಕಾಣಿಕೆ ಸಮಿತಿ ಉಳ್ಳಾಲ ಕ್ಷೇತ್ರ ಕೊಲ್ಯ ಸೌಭಾಗ್ಯ ಸಭಾ ಸದನದಲ್ಲಿ ಹಮ್ಮಿಕೊಳ್ಳಲಾದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಈ ಸಂದರ್ಭ ಕಟೀಲು ಕ್ಷೇತ್ರದ ಹರಿನಾರಾಯಣ ಆಸ್ರಣ್ಣ, ಸದಾನಂದ ಆಸ್ರಣ್ಣ, ಮಂಗಳೂರು ಸಮಿತಿಯ ಪ್ರಮುಖರಾದ ಗಣೇಶ್ ಭಟ್ ಶರವು, ಕೋಟಿ ಜಪಯಜ್ಞದ ಪ್ರ.ಕಾ ಗಿರಿಧರ್ ಶೆಟ್ಟಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *