Header Ads
Header Ads
Breaking News

ಜ.24ರಂದು ಕೇಬಲ್ ನಿರ್ವಾಹಕರ ಮುಷ್ಕರ

ಕೇಂದ್ರ ಸರ್ಕಾರದ ನೂತನ ಕೇಬಲ್ ಕಾಯಿದೆಯನ್ನು ವಿರೋಧಿಸಿ ಗುರುವಾರಂದು ಕೇಬಲ್ ನಿರ್ವಾಹಕರು ಒಂದು ದಿನದ ಮುಷ್ಕರ ಕೈಗೊಂಡಿದ್ದಾರೆ. ರಾಜ್ಯದಾದ್ಯಂತ ಕೇಬಲ್ ನಿರ್ವಾಹಕರ ಸಂಘ ಕೊಟ್ಟಿರುವ ಕರೆಯಂತೆ ಬೆಳಿಗ್ಗಿನಿಂದ ರಾತ್ರಿ ತನಕವೂ ಕೇಬಲ್ ಬಂದ್ ಆಗಿರುತ್ತದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕವೂ ಕೇಬಲ್ ಚಾನೆಲ್‌ಗಳ ಪ್ರಸಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗುತ್ತದೆ. ಸರಕಾರವು ತೆಗೆದುಕೊಂಡಿರುವ ನೂತನ ನೀತಿಗಳು ಕೇಬಲ್ ಗ್ರಾಹಕರ ಮೇಲೆ ಅತಿ ದೊಡ್ಡ ಆರ್ಥಿಕ ಹೊರೆಯಾಗಲಿದೆ ಕೇಬಲ್ ವೃತ್ತಿಯ ಮೂಲಕ ಬದುಕನ್ನು ಕಟ್ಟಿಕೊಂಡಿರುವ ನಿರ್ವಾಹಕರು ಬೀದಿಪಾಲಾಗುವ ಪರಿಸ್ಥಿತಿ ತಲೆದೋರಲಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಮೇಲೆ ಬರೆ ಎಳೆಯುವ ಸರ್ಕಾರ ಕ್ರಮ ಖಂಡಿಸಿ ಪ್ರತಿಭಟನೆ ನಡೆಯಲಿದೆ. ಕೇಬಲ್ ಗ್ರಾಹಕರು ಈ ಪ್ರತಿಭಟನೆ ಬೆಂಬಲಿಸಿ ಸಹಕರಿಸಬೇಕೆಂದು ಕರಾವಳಿಯ ಕೇಬಲ್ ನಿರ್ವಾಹಕರ ಸಂಘಗಳು ವಿನಂತಿಸಿಕೊಂಡಿವೆ.

Related posts

Leave a Reply