Header Ads
Header Ads
Breaking News

ಜ.25ರಿಂದ 28ರ ವರೆಗೆ ಶ್ರೀ ಮಹಾದೇವಿ ಭಜನಾ ಮಂದಿರದ ಸುವರ್ಣ ಮಹೋತ್ಸವ ಕಾರ್ಯಕ್ರಮ

ವಿಟ್ಲ: ಶ್ರೀ ಮಹಾದೇವಿ ಭಜನಾ ಮಂದಿರದ ಸುವರ್ಣ ಮಹೋತ್ಸವ ಸಮಾರಂಭ ಜ.25ರಿಂದ ಮೊದಲ್ಗೊಂಡು ಜ.28ರ ತನಕ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಅಳಿಕೆ ಗ್ರಾಮದ ಕಲ್ಲೆಂಚಿಪಾದೆ ಮಹಾದೇವಿ ಭಜನಾ ಮಂಡಳಿಯ ನೇತೃತ್ವದಲ್ಲಿ ನಡೆಯಲಿದೆ. ವೇದಮೂರ್ತಿ ಕುಂಟುಕುಡೇಲು ಗುರುರಾಜ ತಂತ್ರಿಯವರ ಮಾರ್ಗದರ್ಶನದಲ್ಲಿ ಸುವರ್ಣ ಮಹೋತ್ಸವ ಸಮಾರಂಭ ಜರುಗಲಿದೆ.

ಬಂಟ್ವಾಳ ತಾಲ್ಲೂಕಿನ ಅಳಿಕೆ ಗ್ರಾಮದ ಈಶಾನ್ಯ ಭಾಗದಲ್ಲಿ ಪುರಾಣ ಪ್ರಸಿದ್ಧ ಕಲೆಂಜಿ ಮಲೆಯ ತಪ್ಪಲಲ್ಲಿ ರುದ್ರರಮಣೀಯ ಶಿಲಾಶಿಖರಾಗ್ರದಲ್ಲಿ ನೆಲೆನಿಂತ ಗ್ರಾಮದೈವ ಶ್ರೀ ಕಲ್ಲೆಂಚಿನಾಯ ಪಿಲಿಚಾಮುಂಡಿ ದೈವಸ್ಥಾನದ ಸಮೀಪ ಇರುವ ಶ್ರೀ ಮಹಾದೇವಿ ಭಜನಾ ಮಂದಿರಕ್ಕೆ ಇದೀಗ ಸುವರ್ಣ ಸಂಭ್ರಮ. ಪುಳಿಂಚಾರು ಪಿ ತನಿಯಪ್ಪ ಅವರು 1969ರಲ್ಲಿ ಸ್ಥಾಪಿಸಿದ ಈ ಭಜನಾ ಮಂದಿರವನ್ನು ಅಳಿಕೆ ವಿದ್ಯಾಸಂಸ್ಥೆಯ ಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರು ಉದ್ಘಾಟಿಸಿದ್ದರು. ಮಿತ್ತಳಿಕೆ ದಿ. ಅಮ್ಮುಶೆಟ್ಟಿಯವರ ಜಾಗದಲ್ಲಿ ಸಣ್ಣ ಮುಳಿಹುಲ್ಲಿನ ಕಟ್ಟಡದಲ್ಲಿ ಪ್ರಾರಂಭಗೊಂಡು ಬಳಿಕ ಹಂಚಿನ ಮಾಡಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ.

ಮಂದಿರದ 17ನೇ ವಾರ್ಷಿಕೋತ್ಸವ ಬಳಿಕ ಅಂದರೆ 1986ರಲ್ಲಿ ಅಧ್ಯಕ್ಷರಾಗಿ ಪಿ ಚೆನ್ನಪ್ಪ ಅಳಿಕೆ, ಜವಾಬ್ದಾರಿ ವಹಿಸಿಕೊಂಡ ಬಳಿಕ ಮಂದಿರಕ್ಕೆ ಒಂದು ನೆಲೆಯಾಗಬೇಕೆಂದು ಕನಸು ಕಂಡಿದ್ದರು. ಗೌರವಾಧ್ಯಕ್ಷರಾಗಿ ಕಾನ ಈಶ್ವರ ಭಟ್ ಅವರು ಭಜನಾ ಮಂದಿರ ನಿರ್ಮಿಸುವ ಸಂಕಲ್ಪ ಮಾಡಿದರು. ಇದರ ಫಲವಾಗಿ 1994ರಲ್ಲಿ ಕಲ್ಲೆಂಚಿಪಾದೆಗೆ ಸ್ಥಳಾಂತರಿಸಿ, ಊರ-ಪರವೂರ ದಾನಿಗಳ ಸಹಕಾರದಲ್ಲಿ ಭವ್ಯವಾದ ಭಜನಾ ಮಂದಿರ ನಿರ್ಮಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಒಡಿಯೂರು ಶ್ರೀ, ಮಾಣಿಲ ಶ್ರೀ, ಕಣಿಯೂರು ಶ್ರೀ, ಬಾಳೆಕೋಡಿ ಶ್ರೀ ಮಾರ್ಗದರ್ಶನದಲ್ಲಿ ಸುವರ್ಣ ಮಹೋತ್ಸವ ಸಮಿತಿ ರಚಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಜ.25ರಂದು ಬೆಳಗ್ಗೆ ಭಜನೆ – ನಾಮ ಸಂಕೀರ್ತನೆ ಆರಂಭಗೊಳ್ಳಲಿದೆ. ಉಕ್ಕುಡ ಶ್ರೀ ದುರ್ಗಾ ಪರಮೇಶ್ವರೀ ಭಜನಾ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸಲಿದೆ. ವಿಟ್ಲ ಅರಮನೆ ವಿ.ಜನಾರ್ದನ ವರ್ಮ ಅರಸರು ಉದ್ಘಾಟಿಸಲಿದ್ದಾರೆ. ಕನ್ಯಾನ ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಡಾ| ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ಉಗ್ರಾಣ ಮುಹೂರ್ತ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಂತೆಯೇ ಜನವರಿ 26 ಮತ್ತು 27ರಂದು ಧಾರ್ಮಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ನಡೆಯಲಿರುವುದು.

Related posts

Leave a Reply