Header Ads
Header Ads
Breaking News

ಜ.27ರಂದು ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆ ದೇವಾಲಯದಲ್ಲಿ ಸಮುದಾಯ ದಿನ ಅಚರಣೆ, ನವೀಕೃತ ಸ್ಮಶಾನ ಲೋಕಾರ್ಪಣೆ

ಸಮುದಾಯ ದಿನ ಆಚರಣೆ ಮತ್ತು ನೂತನ ನವೀಕೃತ ಸ್ಮಶಾನ ಲೋಕಾರ್ಪಣೆ ಹಾಗೂ ತೆರೆದ ವೇದಿಕೆಯ ಉದ್ಘಾಟನಾ ಸಮಾರಂಭ ಜನವರಿ 27ರಂದು ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ನಡೆಯಲಿದೆ. ನವೀಕೃತ ಸ್ಮಶಾನದ ಲೋಕಾರ್ಪಣೆ ಹಾಗೂ ಸ್ಮಶಾನ ಆಶೀರ್ವಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ದಾನಾ ಅವರು ನೀಡಲಿದ್ದಾರೆ.ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಹಿಂಭಾಗದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನವೀಕೃತ ಸ್ಮಶಾನ ನಿರ್ಮಾಣಗೊಂಡಿದೆ. ಅದಲ್ಲದೇ ಚರ್ಚ್ ನ ಇನ್ನೊಂದು ಬದಿಯಲ್ಲಿ ಸುಸಜ್ಜಿತ ತೆರೆದ ವೇದಿಕೆ ಹಾಗೂ ಮೈದಾನ ನಿರ್ಮಾಣಗೊಂಡಿದ್ದು, ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ.ಬೆಳಿಗ್ಗೆ ನವೀಕೃತ ಸ್ಮಶಾನ ಲೋಕಾರ್ಪಣೆ ಹಾಗೂ ಸ್ಮಶಾನ ಆಶೀರ್ವಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ದಾನಾ ಅವರು ನೀಡಲಿದ್ದಾರೆ. ಬಳಿಕ ಅವರ ನೇತೃತ್ವದಲ್ಲಿ ಬಲಿ ಪೂಜೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಂಗಳೂರು ಮಾಜಿ ಶಾಸಕ ಜೆ.ಆರ್ ಲೋಬೋ ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಪೆರುವಾಯಿ ಚರ್ಚ್ ವ್ಯಾಪ್ತಿಯ ಎಲ್ಲಾ ಕುಟುಂಬದವರು ಜತೆ ಸೇರಿ ಈ ಕಾರ್ಯಕ್ರಮದಲ್ಲಿ ಸಂಭ್ರಮಿಸಲಿದ್ದಾರೆ ಎಂದು ಚರ್ಚ್‌ನ ಧರ್ಮ ಗುರು ವಿಶಾಲ್ ಮೋನಿಸ್ ತಿಳಿಸಿದ್ದಾರೆ.

Related posts

Leave a Reply