Header Ads
Header Ads
Breaking News

ಜ.28: ಪುತ್ತೂರಿನಲ್ಲಿ ಕೆಥೋಲಿಕ್ ಧರ್ಮಾಧ್ಯಕ್ಷರ ಭವನ ಹಾಗೂ ಕಿರಿಯ ಗುರುಪೀಠ ಉದ್ಘಾಟನೆ

ಪುತ್ತೂರು: ಪುತ್ತೂರು ತಾಲೂಕಿನ ಪಂಜಳದಲ್ಲಿ ನಿರ್ಮಿಸಲಾಗಿರುವ ಸಿರೋ ಮಲಂಕರ ಕೆಥೋಲಿಕ್ ಧರ್ಮಸಭೆಯ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ನೂತನ ಭವನ ಹಾಗೂ ಕಿರಿಯ ಗುರುಪೀಠ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ ಜ. 28 ರಂದು ಪೂರ್ವಾಹ್ನ ನಡೆಯಲಿದೆ.

ಈ ಬಗ್ಗೆ ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜೋರ್ ಡಾ| ಎಲ್ದೊ ಪುತ್ತನ್‍ ಕಂಡತ್ತಿಲ್, ಪರಮಶ್ರೇಷ್ಠ ಮಹಾ ಧರ್ಮಾಧ್ಯಕ್ಷ ಬಸೇಲಿಯೋಸ್ ಕಾರ್ಡಿನಲ್ ಕ್ಲಿಮೀಸ್ ಕಥೋಲಿಕೋಸ್ ಅಧ್ಯಕ್ಷತೆಯಲ್ಲಿ ಪವಿತ್ರೀಕರಣ ವಿ„ಯು ವಿವಿಧ ಧರ್ಮಪ್ರಾಂತ್ಯಗಳ ಧರ್ಮಾಧ್ಯಕ್ಷರ ಉಪಸ್ಥಿತಿಯಲ್ಲಿ ಧಾರ್ಮಿಕ ವಿ„ ವಿಧಾನಗಳೊಂದಿಗೆ ನಡೆಯಲಿದೆ ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು, ಸಿರೋ ಮಲಂಕರ ಕಥೋಲಿಕ್ ಧರ್ಮಸಭೆಯ ಶ್ರೇಷ್ಠ ಮಹಾ ಧರ್ಮಾಧ್ಯಕ್ಷ ಬಸೇಲಿಯೋಸ್ ಕಾರ್ಡಿನಲ್ ಕ್ಲಿಮೀಸ್ ಕಥೋಲಿಕೋಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಗೃಹ ಸಚಿವ ಎಂ.ಬಿ. ಪಾಟೀಲ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯ್ಲಲಿ ಪುತ್ತೂರು ಧರ್ಮಪ್ರಾಂತ್ಯದ ಪಾಲನಾ ಸಮಿತಿ ಕಾರ್ಯದರ್ಶಿ ಯೊಹನ್ನಾನ್ ಓ.ಎಂ, ಕಾರ್ಯಕ್ರಮ ಪ್ರಚಾರ ಸಮಿತಿ ಸಂಚಾಲಕ ಹಾಗೂ ಓ.ಐ.ಸಿ. ಧರ್ಮಗುರು ವಂ| ಫ್ರಾನ್ಸಿಸ್ ತೆಕ್ಕಪೂಕಳಂ, ಪಾಲನಾ ಸಮಿತಿ ಸದಸ್ಯ ಎಂ. ಮಾಮಚ್ಚನ್ ಉಪಸ್ಥಿತರಿದ್ದರು.

Related posts

Leave a Reply