Header Ads
Header Ads
Breaking News

ಜ.4ರಿಂದ ಆಳ್ವಾಸ್ ವಿರಾಸತ್: ಪದ್ಮಶ್ರೀ ಹರಿಹರನ್‍ರಿಗೆ ವಿರಾಸತ್- 2019 ಪ್ರಶಸ್ತಿ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ವೈಭವದ ಸಾಂಸ್ಕೃತಿಕ ಉತ್ಸವ ” ಆಳ್ವಾಸ್ ವಿರಾಸತ್” ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು ಈ ಬಾರಿ ಖ್ಯಾತ ಹಿನ್ನಲೆ ಗಾಯಕ, ಫ್ಯೂಶನ್ ಸಂಗೀತ ಸಾಧಕ ಪದ್ಮಶ್ರೀ ಹರಿಹರನ್ ಅವರಿಗೆ “ಆಳ್ವಾಸ್ ವಿರಾಸತ್-2019″ರ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದೇವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಅವರು ಬುಧವಾರ ತನ್ನ ಕಛೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಜನವರಿ 4-6ರವರೆಗೆ ಮೂಡುಬಿದಿರೆಯ ಪುತ್ತಿಗೆಯಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿದ್ದು, ಸಂಸ್ಕೃತಿ ಪ್ರಿಯರಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಸದೌತಣ ನೀಡಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ಆಳ್ವಾಸ್ ವಿರಾಸತ್‍ನಲ್ಲಿ ಕಳೆದ 25 ವರ್ಷಗಳಿಂದ ಮಹೋನ್ನತ ಸಾಂಸ್ಕøತಿಕ ಪ್ರತಿಭೆಯೊಂದನ್ನು ಗುರುತಿಸಿ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ರೂ 1ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಈ ಬಾರಿಯ ಪ್ರಶಸ್ತಿಯನ್ನು ಪಡೆಯುತ್ತಿರುವವರು ಭಾರತೀಯ ಚಲನಚಿತ್ರ ರಂಗದಲ್ಲಿ ಹಿನ್ನಲೆ ಗಾಯಕರಾಗಿ ಪ್ರಸಿದ್ಧರಾದ ಹರಿಹರ ಅನಂತ ಸುಬ್ರಮಣಿಯನ್ ಅವರು “ಹರಿಹರನ್” ಎಂದೇ ಖ್ಯಾತರು. ಗಜಲ್, ಭಕ್ತಗೀತೆ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತಗಳಲ್ಲಿ ಅಸಾಧಾರಣ ಪ್ರತಿಭೆಯಾಗಿರುವ ಹರಿಹರನ್ ತಮಿಳು, ಹಿಂದಿ, ಮಲೆಯಾಳಂ, ಕನ್ನಡ, ಮರಾಠಿ, ಭೋಜ್‍ಪುರಿ ಮತ್ತು ತೆಲುಗು ಭಾಷೆಗಳ ಚಲನಚಿತ್ರರಂಗದ ಹಿನ್ನಲೆ ಗಾಯಕರಾಗಿ ಜನಮನ ಗೆದ್ದವರು ಎಂದು ಹೇಳಿದರು. ಆಳ್ವಾಸ್‍ನ ಪಿಆರ್‍ಒ ಡಾ. ಪದ್ಮನಾಭ ಶೆಣೈ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Related posts

Leave a Reply