Header Ads
Header Ads
Header Ads
Breaking News

ಝುಬೇರ್ ಕೊಲೆ ಖಂಡಿಸಿ ಬಿಜೆಪಿ ಹಾಗೂ ಡಿವೈಎಫ್‌ಐ ಪ್ರತಿಭಟನೆ ಶೀಘ್ರವೇ ಆರೋಪಿಗಳ ಬಂಧನಕ್ಕೆ ಒತ್ತಾಯ

 

 ಇನ್ನೂ ಝುಬೇರ್ ಕೊಲೆ ಖಂಡಿಸಿ ತೊಕ್ಕೊಟ್ಟಿನಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ. ಜಿಲ್ಲೆಯಲ್ಲಿ ಮಾದಕದ್ರವ್ಯ ಮಾರಾಟಗಾರರಿಗೆ ಮತ್ತು ರೌಡಿಗಳಿಗೆ ಸಹಕಾರ ನೀಡುವ ಮೂಲಕ ಪೊಲೀಸರಿಗೆ ಕರ್ತವ್ಯ ನಡೆಸಲು ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಚೂರಿ ಇರಿತ ಕೊಲೆಗಳಾಗುತ್ತಿವೆ ಎಂದು ಅವ್ರು ಆರೋಪಿಸಿದ್ದರು.

ಈ ವೇಳೆ ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್ , ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು.ಇನ್ನೂ ಮುಕ್ಕಚ್ಚೇರಿ ಜಂಕ್ಷನ್ನಿನಲ್ಲಿ ಜುಬೈರ್ ಹತ್ಯೆ ಖಂಡಿಸಿ ಡಿವೈಎಫ್‌ಐ ನೇತೃತ್ವದಲ್ಲೂ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಸಚಿವ ಖಾದರ್ ಅವರನ್ನು ಮುಕ್ಕಚೇರಿಯಿಂದ ಹಿಂದಕ್ಕೆ ಕಳುಹಿಸಿದರೆ ಸಾಲದು ,ವಿಧಾನಸಭೆಯಿಂದಲೇ ಅವರನ್ನು ಹೊರ ಕಳುಹಿಸುವ ಮೂಲಕ ಗಾಂಜ ಮುಕ್ತ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಅವ್ರು ಹೇಳಿದ್ರು. ಸಿಪಿಎಂ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಮಹಿಳಾ ಮುಖಂಡ ಪದ್ಮಾವತಿ.ಎಸ್.ಶೆಟ್ಟಿ, ಡಿವೈಎಫ್‌ಐ ವಲಯ ಅಧ್ಯಕ್ಷ ಜೀವನರಾಜ್ ಕುತ್ತಾರ್, ಮತ್ತಿತರು ಉಪಸ್ಥತಿರಿದರು. ಇದೇ ವೇಳೆ ಸಿಪಿಎಂ ಮತ್ತು ಡಿವೈಎಫ್‌ಐ ನಿಯೋಗ ಜುಬೈರ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿತು.

Related posts

Leave a Reply