Header Ads
Breaking News

ಝೇಂಕಾರ ಸ್ಟಾರ್ ನೈಟ್‍ಗೆ ಬಿಗ್‍ಬಾಸ್ ಖ್ಯಾತಿಯ ವಾಸುಕಿ ವೈಭವ್!

ಉಜಿರೆ ಫೆ 10: ಉಜಿರೆಯ ಎಸ್.ಡಿ.ಎಂ ಸ್ನಾತ್ತಕೋತ್ತರ ಕೇಂದ್ರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಉತ್ಸವ “ಝೇಂಕಾರ”ದ ಆಕರ್ಷಣೆಯ ಸ್ಟಾರ್‍ನೈಟ್ ಕಾರ್ಯಕ್ರಮಕ್ಕೆ ಕಲರ್ಸ್ಸ್‍ಕನ್ನಡ ಬಿಗ್‍ಬಾಸ್ ಸೀಸನ್ 7ರ ಖ್ಯಾತಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಆಗಮಿಸಲಿದ್ದಾರೆ. ಫೆ 12 ರಂದು ನಡೆಯಲಿರುವ ಸ್ಟಾರ್ ನೈಟ್ ಕಾರ್ಯಕ್ರಮವು ಸಂಜೆ 6ಕ್ಕೆ ಪ್ರಾರಂಭವಾಗಲಿದ್ದು, ಇದೇ ವೇದಿಕೆಯಲ್ಲಿ ‘ಕನಸು ಮಾರಾಟಕ್ಕಿದೆ’ ಚಿತ್ರ ತಂಡವೂ ಭಾಗವಹಿಸಲಿದೆ.ಎರಡು ದಿನದ ಝೇಂಕಾರ ಉತ್ಸವವನ್ನು ಫೆ 12 ರಂದು ಬೆಳಗ್ಗೆ 10ಗಂಟೆಗೆ ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟಾರ್ ಪ್ರೊ. ಎ.ಎಂ.ಖಾನ್ ಉದ್ಘಾಟಿಸಲಿದ್ದು, ಇನ್ನೋವೇಟಿವ್ ಲರ್ನಿಂಗ್ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಮುಖ್ಯ ಅತಿಥಿಯಾಗಿ ಹಾಗೂ ಎಸ್.ಡಿ.ಎಂ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ ಯಶೋವರ್ಮ ಅಧ್ಯಕ್ಷತೆ ವಹಿಸಲಿದ್ದಾರೆ.

Related posts

Leave a Reply

Your email address will not be published. Required fields are marked *