Header Ads
Header Ads
Breaking News

ಟಾಟಾ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ, ವಿರುದ್ಧ ರೂ. 500 ಕೋಟಿ ಮಾನನಷ್ಟ ಮೊಕದ್ದಮೆ

ಟಾಟಾ ಗ್ರೂಪ್ನ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ ವಿರುದ್ಧ ರೂ. ೫೦೦ ಕೋಟಿಗಳ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಟಾಟಾ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಆರ್. ವೆಂಕಟರಮಣನ್ ಅವರು ಈ ಮೊಕದ್ದಮೆ ದಾಖಲಿಸಿದ್ದಾರೆ. ಆಗಸ್ಟ್ ೨೪ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್ ಮಿಸ್ತ್ರಿ ಅವರಿಗೆ ನಿರ್ದೇಶನ ನೀಡಿದೆ.
ಸೈರಸ್ ಮಿಸ್ತ್ರಿ ಮತ್ತು ಇತರರ ವಿರುದ್ಧ ನಾವು ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ಅರ್ಜಿಯನ್ನು ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ ಎಂದು ವೆಂಕಟರಮಣನ್ ಪರ ವಕೀಲ ಪರ್ವೇಜ್ ಮೆಮನ್ ತಿಳಿಸಿದ್ದಾರೆ.
ನನ್ನ ವಿರುದ್ಧ ಮಿಸ್ತ್ರಿ ಅವರು ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ನ ಟ್ರಸ್ಟಿಗಳಿಗೆ ಇಮೇಲ್ ಮೂಲಕ ಮಾನಹಾನಿಕಾರಕ ಸುಳ್ಳು ಸಂದೇಶಗಳನ್ನು ಕಳುಹಿಸಿದ್ದಾರೆ. ಇದರಿಂದ ನನಗೆ ಮಾನನಷ್ಟವಾಗಿದೆ ಎಂದು ಆರೋಪಿಸಿ ವೆಂಕಟರಮಣನ್ ದೂರು ದಾಖಲಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ೨೪ರಂದು ಟಾಟಾ ಸನ್ಸ್ ಸಂಸ್ಥೆಯಿಂದ ಮಿಸ್ತ್ರಿ ಅವರನ್ನು ಹಠಾತ್ತಾಗಿ ಹೊರ ಹಾಕಲಾಗಿತ್ತು. ಏರ್ ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆಯ ವಹಿವಾಟಿನಲ್ಲಿ ರೂ. ೨೨ ಕೋಟಿಗಳ ಅವ್ಯವಹಾರ ನಡೆದಿದ್ದು, ವೆಂಕಟರಮಣನ್ ಅವರು ಈ ಹಗರಣ ಮುಚ್ಚಿಹಾಕಲು ಹವಣಿಸಿದ್ದಾರೆ ಎಂದು ಮಿಸ್ತ್ರಿ ಅವರು ತಮ್ಮ ಇ ಮೇಲ್ ಸಂದೇಶದಲ್ಲಿ ಆರೋಪಿಸಿದ್ದರು.

Related posts

Leave a Reply