Breaking News

ಟಿಕೆಟ್ ನೀಡದ ನಗರ ಸಾರಿಗೆ ಬಸ್‌ಗಳು, ಜಿಲ್ಲಾಧಿಕಾರಿ ಸಭೆಯಲ್ಲಿ ಮಾತುಕತೆ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಜಗದೀಶ್ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಅದಾಲತ್ ಸಭೆ ನಡೆಯಿತು. ಸಭೆಯಲ್ಲಿ ಮಂಗಳೂರು ಸೆಂಟ್ರಲ್ ಹಾಗೂ ಕಂಕನಾಡಿ ರೈಲ್ವೇ ಸ್ಟೇಷನ್‌ಗಳಲ್ಲಿ ಪ್ರೀ ಪ್ರೈಡ್ ಆಟೋ ಸೌಲಭ್ಯಗಳನ್ನು ಪರಿಣಾಮಕಾರಿ ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಜಗದೀಶ್ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಅದಾಲತ್ ಸಭೆ ನಗರದ ಆರ್‌ಟಿ‌ಓ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಆಟೋ ರಿಕ್ಷಾ ಚಾಲಕರು ಮೀಟರ್ ಹಾಕದೇ ಹೆಚ್ಚುವರಿ ಹಣ ವಸೂಲಿ ಮಾಡ್ತಾರೆ ಎಂದು ಸಭೆಯಲ್ಲಿ ಆರೋಪ ಕೇಳಿ ಬಂತು. ಈ ಬಗ್ಗೆ ಜಿಲ್ಲಾಧಿಕಾರಿ ಮಾತನಾಡಿ, ಈ ಬಗ್ಗೆ ನನಗೂ ಅನುಭವವಾಗಿದೆ. ಇದರ ಬಗೆಗೆ ಮುಂದಿನ ದಿನಗಳಲ್ಲಿ ಫ್ರೀಪ್ರೈಡ್ ಆಟೋ ಸೌಲಭ್ಯಗಳನ್ನು ಪರಿಣಾಮವಾಗಿ ಅನುಷ್ಟಾನ ಮಾಡಲಾಗುವುದು. ಶೀಘ್ರದಲ್ಲೇ ರೈಲ್ವೇ, ಪೊಲೀಸ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಭೆ ಕರೆಯಲಾಗುವುದು ಅಂತಾ ಹೇಳಿದರು.
ಖಾಸಗಿ ಬಸ್‌ಗಳಲ್ಲಿ ಟಿಕೆಟ್ ನೀಡದೆ ಇರುವ ಬಗ್ಗೆ ಸಭೆಯಲ್ಲಿ ಆರೋಪ ಕೇಳಿ ಬಂತು. ಇನ್ನೂ ಖಾಸಗಿ ಬಸ್ ಹೆಚ್ಚುವರಿಯಾಗಿ ಹಿರಿಯ ನಾಗರಿಕರಿಗೆ ಸೀಟ್ ಸೌಲಭ್ಯಗಳನ್ನ ನೀಡಬೇಕೆಂದು ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್ ಹೇಳಿದರು. ಈ ಬಗೆಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಬಸ್‌ಗಳಲ್ಲಿ ಟಿಕೇಟ್ ನೀಡದೇ ಇರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಹಿರಿಯ ನಾಗರಿಕರಿಗೆ ಬಸ್ ಗಳಲ್ಲಿ ೨ ಸೀಟುಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು ಅಂತಾ ಹೇಳಿದರು. ಮುಂದಿನ ದಿನಗಳಲ್ಲಿ ೩ ಕೆ‌ಎಸ್‌ಆರ್‌ಟಿಸಿ ಬಸ್‌ಗಳು ಕೊಣಾಜೆ ಯುನಿವರ್ಸಿಟಿ ಕ್ಯಾಂಪಸ್ ಮಾರ್ಗವಾಗಿ ಸಂಚಾರ ಮಾಡಬೇಕೆಂದು ಡಿಸಿ ಹೇಳಿದ್ರು. ಸಭೆಯಲ್ಲಿ ಜಿಲ್ಲಾ ಎಸ್. ಪಿ. ಭೂಷಣ್ ಬೊರಾಸೆ, ಡಿಸಿಪಿ ಸಂಜೀವ್ ಪಾಟೀಲ್, ಅಪರ ಪ್ರಾದೇಶಿಕ ಅಧಿಕಾರಿ ಜಿ. ಎಸ್. ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply