

ನವದೆಹಲಿ, ಜ. 29: ಗಣರಾಜ್ಯೋತ್ಸವದ ದಿನ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಚಿತ್ರ ತಂಡವೊಂದನ್ನು ಸಂದರ್ಶನ ಮಾಡಲು ಹೋಗಿದ್ದ ಗೌರಿ ಮೀಡಿಯಾ ತಂಡದ ಸದಸ್ಯರ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆಸುವ ಬೆದರಿಕೆ ಒಡ್ಡಲಾಗಿದೆ.
ರೈತ ಹೋರಾಟದ ಸಾಕ್ಷ್ಯಚಿತ್ರ ನಿರ್ಮಿಸಲೆಂದು ದೆಹಲಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಪೆಡೆಸ್ಟ್ರಿಯನ್ ಪಿಕ್ಚರ್ಸ್ ತಂಡ ಗಣರಾಜ್ಯೋತ್ಸವದ ದಿನ ಕೆಂಪು ಕೋಟೆಯ ಬಳಿ ಹಲ್ಲೆಗೆ ಒಳಗಾಗಿತ್ತು. ಇವರನ್ನು ಸಂದರ್ಶನ ಮಾಡಲು ತೆರಳಿದ್ದ ಗೌರಿ ಮೀಡಿಯಾ ತಂಡದ ಸ್ವಾತಿ, ಮಮತ, ಕಾವ್ಯ ಮತ್ತು ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಅವರಿಗೆ ಬೆದರಿಕೆ ಒಡ್ಡಲಾಗಿದೆ.
ಕಳೆದ 25 ದಿನಗಳಿಂದ ದೆಹಲಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಪೆಡಿಸ್ಟ್ರಿಯನ್ ಪಿಕ್ಚರ್ಸ್ ತಂಡ ಗಾಯಗೊಂಡ ಬಳಿಕ, ಹರ್ಯಾಣ ಗಡಿಯಲ್ಲಿರುವ ನಯಾ ಗಾಂವ್ನಲ್ಲಿ ತಂಗಿದ್ದರು. ಗೌರಿ ಮೀಡಿಯಾ ತಂಡ ಅವರ ಸಂದರ್ಶನ ಮುಗಿಸಿ ಹೊರಡುವಾಗ ಅಲ್ಲಿಗೆ ಧಾವಿಸಿದ ಗೂಂಡಾಗಳ ಗುಂಪು ಪಿಸ್ತೂಲು ತೋರಿಸಿ ತಂಡದ ಸದಸ್ಯರು, ಕುಟುಂಬದ ಸದಸ್ಯರಿಗೆ ಬೆದರಿಕೆ ಒಡ್ಡಿದ್ದಾರೆ.
ತಂಡದಲ್ಲಿದ್ದ ಗೌರಿಲಂಕೇಶ್ನ್ಯೂಸ್.ಕಾಮ್ನ ಸ್ವಾತಿ ಶುಕ್ಲಾ, ‘ಕೋಣೆಯೊಳಗೆ ನುಗ್ಗಿದ 5-6 ಗೂಂಡಾಗಳು ಬೆದರಿಸಿದೆರು. ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ನೇಣು ಹಾಕಿಕೊಂಡು ಸಾಯಿರಿ ಎಂದರು. ಜೊತೆಗೆ ಇದ್ದ ಭಾರತ್ ಕಿಸಾನ್ ಯೂನಿಯನ್ನ ಮಾಧ್ಯಮದ ಸದಸ್ಯರು ಅವರೊಂದಿಗೆ ಮಾತನಾಡಲು ಯತ್ನಿಸಿದರು. ಆದರೆ, ಬೆದರಿಸಲು ಬಂದವರು ಮಾತಿಗೆ ಅವಕಾಶ ನೀಡಲಿಲ್ಲ ಎಂದು ಘಟನೆ ವಿವರಿಸಿದರು.ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸಂಯುಕ್ತ ಕಿಸಾನ್ ಮೋರ್ಚಾ ಸದಸ್ಯರು ಸ್ಥಳಕ್ಕೆ ಆಗಮಿಸಿ ಮಾಧ್ಯಮ ತಂಡಕ್ಕೆ ರಕ್ಷಣೆ ಒದಗಿಸಿದರು.
ಗಣರಾಜ್ಯೊತ್ಸವ ದಿನದಂದು ಬಿಜೆಪಿ-ಸಂಘ ಪರಿವಾರ ಪ್ರೇರಿತ ಪಿತೂರಿಯಿಂದಾಗಿ ಹಿಂಸಾಚಾರ ನಡೆದಿದ್ದು, ಮಾಧ್ಯಮಗಳ ಮೂಲಕ ರೈತ ಹೋರಾಟಕ್ಕೆ ಮಸಿ ಬಳಿಸುವ, ದೇಶದ ಜನರಲ್ಲಿ ತಪ್ಪು ಮಾಹಿತಿ ಹರಡುವ ಪ್ರಯತ್ನ ಮಾಡುತ್ತಲೇ ಇದೆ. ಪರ್ಯಾಯ ಮಾಧ್ಯಮಗಳು, ಮುಖ್ಯವಾಹಿನಿ ಮಾಧ್ಯಮಗಳ ಪಕ್ಷಪಾತ ಧೋರಣೆಯನ್ನು ಅನಾವರಣ ಮಾಡುತ್ತಿರುವ ಪರ್ಯಾಯ ಮಾಧ್ಯಮಗಳನ್ನು ಬೆದರಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂಬ ಅಭಿಪ್ರಾಯ ರೈತ ನಾಯಕರು. ಅವರು ಮಾತುಗಳು, ಬೆದರಿಕೆ ಒಡ್ಡಿದ ರೀತಿ ಅವರು ಬಿಜೆಪಿ ಗೂಂಡಾಗಳು ಎಂದು ವ್ಯಕ್ತಪಡಿಸಿದರು