Header Ads
Header Ads
Breaking News

ಟಿಪ್ಪು ಜಯಂತಿಗೆ ಕರಾವಳಿ ಶಾಸಕರ ವಿರೋಧ.!

ಕರಾವಳಿಯ ಬಿಜೆಪಿ ಶಾಸಕರು ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಾರೆ. ಉಡುಪಿ ಜಿಲ್ಲೆಯ ಯಾವುದೇ ಬಿಜೆಪಿ ಶಾಸಕರ ಹಸರನ್ನು ಆಮಂತ್ರಣದಲ್ಲಿ ಹಾಕುವುದು ಬೇಡ ಎಂದು ಈಗಾಗಲೇ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಇದೀಗ ಬೈಂದೂರು ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ, ಅದೇ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕೂ ತನ್ನ ಹೆಸರನ್ನು ಹಾಕಬಾರದು ಎಂದು ಆಗ್ರಹಿಸಿದ್ದಾರೆ. ತಾತ್ವಿಕ ಮತ್ತು ಸೈದ್ದಾಂತಿಕ ನೆಲೆಯಲ್ಲಿ ತಾನು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದು, ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರನ್ನು ಮುದ್ರಿಸಲೇ ಬಾರದು ಎಂದು ಒತ್ತಾಯಿಸಿದ್ದಾರೆ.

Related posts

Leave a Reply