Header Ads
Header Ads
Breaking News

ಟಿಪ್ಪು ಜಯಂತಿಯಿಂದ ಲಕ್ಷಾಂತರ ಮಂದಿಗೆ ಅನ್ಯಾಯವಾಗಿದೆ ಕ್ರೈಸ್ತ, ಅಯ್ಯಂಗಾರ್, ಕೊಡವರ ಮೇಲೆ ಟಿಪ್ಪುವಿನಿಂದ ಧಾಳಿ ಸರ್ಕಾರಿ ವ್ಯವಸ್ಥೆಯಲ್ಲಿ ಇಂತವರ ಜಯಂತಿ ಯಾಕೆ? ಉಡುಪಿಯಲ್ಲಿ ಬಿಜೆಪಿ ವಕ್ತಾರೆ ಮಾಳವಿಕ ಅವಿನಾಶ್ ಹೇಳಿಕೆ

ಟಿಪ್ಪು ಜಯಂತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಟಿಪ್ಪುವಿನಿಂದ ಲಕ್ಷಾಂತರ ಮಂದಿಗೆ ಅನ್ಯಾಯವಾಗಿದ್ದು ಮಂಗಳೂರು ಕಾರವಾರದ ಕ್ರೈಸ್ತರ ಹತ್ಯೆಯಾಗಿದೆ. ಮಂಡ್ಯದಲ್ಲಿ ಅಯ್ಯಂಗಾರ್ ಗಳ ಮೇಲೆ ದೌರ್ಜ್ಯನ್ಯ ನಡೆಸಿದ್ದಾನೆ.ಮಡಿಕೇರಿಯಲ್ಲಿ ಕೊಡವರ ಮೇಲೆ ಟಿಪ್ಪು ದೌರ್ಜ್ಯನ್ಯ ಎಸಗಿದ್ದು ಇಂತವರ ಜಯಂತಿ ಸರಕಾರಿ ವ್ಯವಸ್ಥೆಯಲ್ಲಿ ಬೇಕಾ ಎಂದು ಬಿಜೆಪಿ ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್ ಪ್ರಶ್ನಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಹತ್ವಾಕಾಂಕ್ಶೆ ಹೊತ್ತು ಬಿಜೆಪಿಯ ಪರಿವರ್ತನಾ ಯಾತ್ರೆ ಹೊರಟಿದೆ.

ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಯಾತ್ರೆ,ಮಡಿಕೇರಿಗೆ ಪರಿವರ್ತನಾ ಯಾತ್ರೆ ತಪುಪಬೇಕಿತು. ಕಾರಣ ನೀಡದೇ ಯಾತ್ರೆಗೆ ಅನುಮತಿ ನಿರಾಕರಿಸಿದರು. ರಾಜ್ಯ ಸರ್ಕಾರ ಪ್ರಜಾಪ್ರಭುತ್ವದ ವಿರುದ್ದವಾಗಿ ನಡೆದುಕೊಂಡಿದೆ. ಪೊಲೀಸರು, ಜಿಲ್ಲಾಡಳಿತ ಯತ್ರೆಗೆ ಅವಕಾಶ ನಿಡಿಲ್ಲ .ನವೆಂವರ್ 28 ಕ್ಕೆ ಪ್ರದಾನಿ ಅವರು ಪರಿವರ್ತನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಬೈಟ್: ಮಾಳವಿಕ ಅವಿನಾಶ್ (ರಾಜ್ಯ ಬಿಜೆಪಿ ವಕ್ತಾರೆ)