Header Ads
Header Ads
Header Ads
Header Ads
Header Ads
Header Ads
Breaking News

ಟಿಪ್ಪು ಜಯಂತಿ ಕಾರ್ಯಕ್ರಮ ರದ್ದು, ಬಿಜೆಪಿ ಹೋರಾಟಕ್ಕೆ ಸಂದ ಜಯ : ಸಂಜೀವ ಮಠಂದೂರು ಹೇಳಿಕೆ

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂವಿಧಾನದ 370 ಮತ್ತು 35(ಎ) ಅನುಮೋದನೆ ದೊರಕಿರುವುದು ಬಿಜೆಪಿಗೆ ಸೈದಾಂತಿಕ ಜಯ ದೊರಕಿದಂತಾಗಿದೆ. ಒಂದು ಧ್ವಜ, ಒಂದು ಪ್ರಧಾನಿ ಬೇಡಿಕೆಯನ್ನು ಈ ಹಿಂದೆ ಹೋರಾಟದ ಮೂಲಕ ಜಯ ಸಾಧಿಸಿತ್ತು. ಇದೀಗ ಒಂದೇ ಕಾನೂನು ಒಂದೇ ಸಂವಿಧಾನ ಬೇಡಿಕೆಯು ಈ ಮೂಲಕ ಈಡೇರಿದಂತಾಗಿದೆ ಎಂದು ಬಿಜೆಪಿ ಜಿಲ್ಲಧ್ಯಕ್ಷ ಸಂಜೀವ ಮಠಂದೂರು ಹೇಳಿದರು.ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ದೇಶದ ಏಕತೆ ಮತ್ತು ಅಖಂಡತೆಗೆ ಪೂರಕ ಆಗಿರುವ ಮತ್ತು ಪತ್ಯೇಕವಾದಿ ಶಕ್ತಿಗಳಿಗೆ ಕುಮ್ಮಕ್ಕು ಕೊಡುತ್ತಿರುವ ಈ ವಿಧಿಯನ್ನು ರದ್ದು ಮಾಡಿರುವುದನ್ನು ಜಿಲ್ಲಾ ಬಿಜೆಪಿ ಹರ್ಷದಿಂದ ಸ್ವಾಗತಿಸುತ್ತಿದೆ ಎಂದರು.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪನವರ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಮೀನಿಗಾರರ ಮತ್ತು ನೇಕಾರರ ಸಾಲಮನ್ನಾ ಘೋಷಣೆ ಮಾಡಿರುವುದನ್ನು ದ.ಕ. ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ ಎಂದರು.
ಇನ್ನು ಕನ್ನಡ ಭಾಷೆ, ಸಂಸ್ಕøತಿಗಳಿಗೆ ಅನ್ಯಾಯ ಎಸಗಿದ ಪರಮತ ದ್ವೇಷಿ ಟಿಪ್ಪು ಜಯಂತಿಯನ್ನು ರಾಜಕೀಯ ಲಾಭದ ಲೆಕ್ಕಾಚಾರದಿಂದ ತುಷ್ಟೀಕರಣ ನೀತಿಯ ಅಂಗವಾಗಿ ಈ ಹಿಂದಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿತ್ತು. ಇದೀಗ ಬಿಜೆಪಿ ಸರಕಾರ ಟಿಪ್ಪು ಜಯಂತಿ ರದ್ದು ಮಾಡಿರುವುದು ಅತೀವ ಹರ್ಷ ತಂದಿದೆ ಎಂದು ಹೇಳಿದರು. ಈಗಾಗಲೇ ಜಿಲ್ಲೆಯಲ್ಲಿ ಸದಸ್ಯತನಾ ಅಭಿಯಾನ ಹೊಸ ಸದಸ್ಯರ ನೊಂದಣಿ ಕಾರ್ಯ ಬರದಿಂದ ನಡೆಯುತ್ತಿದ್ದು, ಈಗಾಗಲೇ 75,000 ಕ್ಕೂ ನೊಂದಾವಣೆ ಆಗಿದ್ದು 2 ಲಕ್ಷದ ಗುರಿಯನ್ನು ಸಾಧಿಸಲಿದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಬ್ರಿಜೇಶ್ ಚೌಟ, ಸತೀಶ್ ಪ್ರಭು, ಕಿಶೋರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *