Header Ads
Header Ads
Breaking News

‘ಟಿಪ್ಪು ಜಯಂತಿ’ ಜನತೆಗೆ ಮಾಡಿದ ಅವಮಾನ :ಭಜರಂಗದಳದ ಪ್ರಾಂತ ಸಂಚಾಲಕ ಸುನೀಲ್

ರಾಜ್ಯ ಸರಕಾರ ಆಚರಿಸಲು ಹೊರಟಿರುವ ಟಿಪ್ಪು ಜಯಂತಿ ಜನತೆಗೆ ಮಾಡಿರುವ ಅವಮಾನ ಇದನ್ನು ಹಿಂಪಡೆಯದಿದ್ದರೆ ಸರಕಾರದ ವಿರುದ್ದ ನ.10ರಂದು ಪ್ರತಿಭಟನೆ ನಡೆಸುವುದಾಗಿ ಭಜರಂಗದಳದ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇತಿಹಾಸದಲ್ಲಿ ಟಿಪ್ಪು ಸುಲ್ತಾನನಷ್ಟು ಹಿಂದೂಗಳ ಹತ್ಯೆ ಮತ್ತು ದೇವಾಲಯಗಳನ್ನು ಕೆಡವಿದ ರಾಜಾ ಮತ್ತೊಬ್ಬನಿಲ್ಲ. ಹೀಗಿದ್ದರೂ ಅವನನ್ನು ಸ್ವಾತಂತ್ರ್ಯ ಹೋರಾಟಗಾರನೆಂಬಂತೆ ಬಿಂಬಿಸಲಾಗಿತ್ತಿದೆ. ಆತ ಮೈಸೂರಿನ 700 ಮಂಡಯಂ ಅಯ್ಯಂಗಾರಿ ಕುಟುಂಬಗಳನ್ನು ನರಮೇಧ ಮಾಡಿದ ಇಂದಿಗೂ ನರಕ ಚತುರ್ಥಶಿಯಂದು ಈ ಕುಟುಂಬಗಳು ಕರಾಳ ದಿನವನ್ನಾಗಿ ಆಚರಿಸುತ್ತಾರೆ. ಕೇರಳದಲ್ಲಿ ಟಿಪ್ಪುವಿನ ಕ್ರೌರ್ಯ ನೋಡಲು ದೇವಸ್ಥಾನ ಗಳು ಮತ್ತು ಚರ್ಚ್ ಗಳು ಸಾಕು. ಆತನ ಜಯಂತಿಗೆ ನಮ್ಮ ವಿರೋಧ ಇದ್ದು ಇದರ ಬದಲಾಗಿ ಮುಸ್ಲೀಂ ಸಮುದಾಯದಲ್ಲಿ ಧೀಮಂತ ವ್ಯಕ್ತಿಗಳಿದ್ದರೆ ಅವರ ಜಯಂತಿ ಆಚರಿಸಲಿಎಂದರು.
ವರದಿ:ಪಲ್ಲವಿ ಸಂತೋಷ್

Related posts

Leave a Reply