Header Ads
Header Ads
Header Ads
Breaking News

ಟಿಪ್ಪು ಜಯಂತಿ ಪ್ರಯುಕ್ರ ಶಾಂತಿ ಸಭೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಡೆದ ಸಭೆ

ಕುಂದಾಪುರ: ಟಿಪ್ಪು ಜಯಂತಿ ಪ್ರಯುಕ್ತ ಶಾಂತಿಸಭೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪಿ‌ಎಸ್‌ಐ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಕುಂದಾಪುರ ಠಾಣಾ ವ್ಯಾಪ್ತಿಯನ್ನ ಕೋಮು ಸೂಕ್ಷ್ಮ ಪ್ರದೇಶ ಎಂದು ಕರೆಯುತ್ತಾರೆ ಆದರೆ ನಾನು ಬಂದುಹತ್ತು ದಿನಗಳಾಗಿದೆ. ಇಲ್ಲಿಯವರೆಗೂ ಯಾವುದೇ ಪ್ರಕರಣಗಳು ನಡೆದಿಲ್ಲ.

ಇದೇ ರೀತಿ ಮುಂದೆಯು ಕೂಡ ಮುಂದುವರಿಯಬೇಕು ಎಂದರು. ಯಾರೋ ಮಾಡಿದ ತಪ್ಪಿಗೆಮುಗ್ದರು ಬಲಿಯಾಗುತ್ತಾರೆ. ಅದಕ್ಕೆ ಕೋಮು ಗಲಭೆಗೆ ಯಾವುದೇ ಆಸ್ಪದ ನೀಡಬಾರದು ಎಂದರು. ನಾನು ಯಾವುದೇ ಕಾರಣಕ್ಕೂ ಅಪರಾಧ ಪ್ರಕರಣಗಳಲ್ಲಿ ಕ್ಷಮೆ ನೀಡುವ ಪ್ರಶ್ನೆಯಿಲ್ಲ. ಟಿಪ್ಪು ಜಯಂತಿ ಬಗ್ಗೆ ಮಾತನಾಡಿದ ಅವರು ಟಿಪ್ಪು ಜಯಂತಿ ಸರ್ಕಾರಿ ಸಂಸ್ಥೆಗಳಲ್ಲಿ ಆಚರಣೆಗೆ ಯಾವುದೆ ತಡೆಯಿಲ್ಲ.

ಆದರೆ ಯಾವುದೇ ಕಾರಣಕ್ಕೂ ಖಾಸಗಿಯಾಗಿ ಆಚರಣೆ ಮತ್ತು ಮೆರವಣಿಗೆಗೆ ಅವಕಾಶ ಇಲ್ಲ ಎಂದರು. ಎಲ್ಲೆಂದರಲ್ಲಿ ಬ್ಯಾರಿಕೇಡ್ ಅಳವಡಿಸಿದ ಬಗ್ಗೆ ಸಾರ್ವಜನಿಕರೊಬ್ಬರು ಆಕ್ಷೆಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪಿ‌ಎಸ್‌ಐ ಹರೀಶ್, ನಾನು ಸರ್ವೆ ಮಾಡಿ ಎಲ್ಲಿ ಬ್ಯಾರಿಕೇಡ್ ಹಾಕುವ ಅವಶ್ಯಕತೆ ಇದೆ ಎಂದು ಅನಿಸಿದ ಕಡೆ ಬ್ಯಾರಿಕೇಡ್ ಅಳವಡಿಸಿದ್ದೇನೆ. ಅನುಕೂಲ ಅನಾನೂಕುಲ ನೋಡಿ ಅಳವಡಿಸಿದೆ ಎಂದರು.

Related posts

Leave a Reply