Header Ads
Header Ads
Breaking News

ಟಿ ಆರ್ ಪಿಗಾಗಿ ನಮ್ಮಂತಹ ವ್ಯಕ್ತಿಗಳನ್ನ ಬಲಿಪಶು ಮಾಡಬೇಡಿ : ಅಬ್ದುಲ್ ರವೂಫ್ ಹೇಳಿಕೆ

ಮಾಧ್ಯಮಗಳು ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು. ಟಿವಿ ಮಾಧ್ಯಮಗಳು ಕೇವಲ ಟಿಆರ್‍ಪಿಗಾಗಿ ನಮ್ಮನ್ನು ಬಲಿಪಶು ಮಾಡಬಾರೆಂದು ಬೆಳ್ತಂಗಡಿಯ ಅಬ್ದುಲ್ ರವೂಫ್ ಹೇಳಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳ್ತಂಗಡಿ ಗೋವಿಂದೂರು ಬಳಿ ಎನ್‍ಐಎ ಅಧಿಕಾರಿಗಳು ನನ್ನನ್ನು ಬಂಧನ ಮಾಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ ಎಂದು ಮಾಧ್ಯಮಗಳಲ್ಲಿ ಸುದ್ಧಿ ಪ್ರಕಟವಾಗುತ್ತಿತ್ತು. ಆದರೆ ನನ್ನನ್ನು ಯಾರೂ ಬಂಧನ ಮಾಡಿಲ್ಲ. ಹಾಗಾಗಿ ಮಾಧ್ಯಮದವರೇ ಯಾವ ಮೂಲ ಎಂದು ತಿಳಿಯಪಡಿಸಬೇಕು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಅವರು ತಿಳಿಸಿದರು. ನಾನು ಭಾರತವನ್ನು ತುಂಬಾ ಪ್ರೀತಿ ಮಾಡುತ್ತೇನೆ. ನಾನು ಭಾರತ ಪ್ರಜೆ ಎನ್ನಲು ಹೆಮ್ಮೆ ಪಡುತ್ತೇನೆ. ಮಾಧ್ಯಮಗಳು ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಬೇಕು. ಈ ಘಟನೆಯಿಂದ ನನಗೆ ತುಂಬಾ ಬೇಸರವಾಗಿದೆ ಅಂತಾ ಅಬ್ದುಲ್ ರವೂಫ್ ಹೇಳಿದ್ರು.

Related posts

Leave a Reply

Your email address will not be published. Required fields are marked *