
ದೇಶದ ಗಡಿಯಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿ ಎದುರಿಸಿದ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಇಬ್ಬರು ಉಗ್ರಗಾಮಿಗಳನ್ನು ಕೊಂದ ವೀರಯೋಧ ಝುಬೇರ್ ನೇರೆಂಕಿ ಅವರನ್ನು ಟೀಮ್ ಬಿ ಹ್ಯೂಮನ್ ಹಾಗೂ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನಿಂದ ನಗರದ ಕಂಕನಾಡಿಯ ವಿಶ್ವಾಸ್ ಕ್ರೌನ್ನ ಟ್ಯಾಲೆಂಟ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಯೋಧ ಝುಬೇರ್ ನೇರೆಂಕಿ ಮಾತನಾಡಿ, 2018ರ ಫೆಬ್ರವರಿಯ ಘಟನೆಯು ತುಂಬ ಮಹತ್ವದ್ದು. ಒಂದೂವರೆ ದಿನಗಳ ಕಾಲ ಕಾರ್ಯಾಚರಣೆ ನಡೆಸಿದೆವು. ವೈರಿಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾದೆವು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ರು. ಈ ವೇಳೆ ಶಾಸಕ ಯು.ಟಿ. ಖಾದರ್, ಸಲಾಂ ಉಸ್ತಾದ್, ಎಕ್ಸ್ಪರ್ಟೈಜ್ ಕಾಂಟ್ರಾಕ್ಟಿಂಗ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶೇಕ್ ಕರ್ನಿರೆ, ಮತ್ತಿತರರು ಉಪಸ್ಥಿತರಿದ್ದರು.