Header Ads
Header Ads
Breaking News

ಟೆಂಪರರ್ ಡಿವೈಡರ್ ನಿಂದ ಅಪಘಾತದ ಭಯ

ಮಂಗಳೂರು ನಗರ ಅಂದ್ರೆ ಸದಾ ಜನಜಂಗುಳಿ, ವಾಹನಗಳ ಓಡಾಟವೇ ಜಾಸ್ತಿ.. ಬೆಳಗಾಯ್ತು ಅಂದ್ರೆ ಸಾಕು ರಸ್ತೆ ಮೇಲೆ ದಾಂಗುಡಿ ಇಡೋ ವಾಹನಗಳು, ಅದೆಷ್ಟು ರೂಲು ಫಾಲೋ ಮಾಡುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಅಂತಹ ರೂಲ್ ಬ್ರೇಕರ್‌ಗಳ ನಿಯಂತ್ರಣಕ್ಕಾಗಿ ಇಲ್ಲೊಂದು ಟೆಂಪರರಿ ಡಿವೈಡರ್ ನಿರ್ಮಾಣವಾಗಿದೆ. ಆದ್ರೆ ಈ ಡಿವೈಡರ್‌ನಿಂದ ಇನ್ನಷ್ಟು ಅಪಘಾತ ಆಗ್ಬಹುದಾದ ಛಾನ್ಸಸ್ ಇದೆ ಅನ್ನೋ ಮಾತು ಕೇಳಿ ಬರ ತೊಡಗಿದೆ.
ರಾಜ್ಯದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಮಹಾನಗರ ಮಂಗಳೂರು. ಇಲ್ಲಿ ದಿನವೊಂದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ರೀತಿಯ ವಾಹನಗಳು ಓಡಾಟ ನಡೆಸುತ್ತಲೇ ಇರುತ್ತವೆ. ಅದ್ರಲ್ಲೂ ರಸ್ತೆ ಮೇಲೆ ಒಡಾಟ ನಡೆಸೋರಲ್ಲಿ ಟ್ರಾಫಿಕ್ ನಿಯಮ ಪಾಲಿಸೋರಿಗಿಂತಲೂ ಜಾಸ್ತಿ ಉಲ್ಲಂಘಿಸೋರೆ ಅಧಿಕ ಸಂಖ್ಯೆಯಲ್ಲಿದ್ದಾರೆ. ಇಂತಹ ನಿಯಮ ಉಲ್ಲಂಘಿಸೋ ಎಲ್ಲಾ ವಾಹನ ಚಾಲಕರನ್ನು ಹಿಡಿದು ಟ್ರಾಫಿಕ್ ಪೊಲೀಸರು ಬುದ್ದಿವಾದ ಹೇಳೋದು ಅಸಾಧ್ಯದ ಮಾತು. ಆದ್ದರಿಂದಾಗಿ ಕೆಲವೊಂದೆಡೆ ಟ್ರಾಫಿಕ್ ಪೊಲೀಸರೇ ಕಡಿವಾಣ ಹಾಕ್ಬೇಕು ಅನ್ನೋ ಕಾರಣಕ್ಕಾಗಿ ತಾವೇ ಏನಾದ್ರೂ ಉಪಾಯವನ್ನು ಹೂಡ್ತಾರೆ. ಅಂತಹದ್ದೇ ಒಂದು ಉಪಾಯ ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಕರಂಗಲ್ಪಾಡಿಯಲ್ಲೂ ಮಾಡಲಾಗಿದೆ. ರಸ್ತೆ ಮಧ್ಯೆ ಕಂಬಗಳನ್ನಿಟ್ಟು ಹಗ್ಗ ಕಟ್ಟಲಾಗಿದೆ. ಈ ಮೂಲಕ ಎರ್ರಾಬಿರ್ರಿ ತೆರಳುತ್ತಿದ್ದ ವಾಹನ ಸವಾರರಿಗೆ ನಿಯಮ ಪಾಲನೆಯ ಅಗತ್ಯತೆ ಎದುರಾಗಿದೆ.ಈ ರೀತಿಯ ಡಿವೈಡರ್ ನಿರ್ಮಾಣ ಮಾಡಿರೋದೇನೋ ಒಳ್ಳೆಯ ವಿಚಾರ. ಆದ್ರೆ ಇದೇ ಡಿವೈಡರ್ ನಿಂದಾಗಿ ದ್ವಿಚಕ್ರ ಸವಾರರು ಪ್ರಾಣ ಭೀತಿ ಎದುರಿಸೋ ಸಾಧ್ಯತೆನೂ ಇದೆ. ಮಧ್ಯಾಹ್ನ ಹೊತ್ತಿನ ಸುಡುಬಿಸಿಲಿಗೆ ಹಾಗೂ ಕತ್ತಲಾಗುತ್ತಿದ್ದಂತೆ ಕಿರುಕಂಬಗಳ ನಡುವೆ ಬಿಗಿದು ಕಟ್ಟಿರೋ ಈ ಡಿವೈಡರ್ ಹಗ್ಗವು ವಾಹನ ಸವಾರರ ಕಣ್ಣಿಗೆ ಸ್ಪಷ್ಟವಾಗಿ ಕಾಣದು. ಇದ್ರಿಂದಾಗಿ ವೇಗವಾಗಿ ಬರೋ ಇಲ್ಲವೇ ತಿರುವು ಪಡೆದುಕೊಳ್ಳೋ ದ್ವಿಚಕ್ರ ವಾಹನ ಸವಾರರ ಪಾಲಿಗಂತೂ ಕುತ್ತಾಗುವ ಸಾದ್ಯತೆ ಇದೆ. ಒಟ್ಟಿನಲ್ಲಿ ಒಳ್ಳೆಯ ಉದ್ದೇಶದಿಂದ ನಿರ್ಮಿಸಿರೋ ಈ ತಾತ್ಕಾಲಿಕ ಡಿವೈಡರ್ ನಿಂದಾಗಿ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಟ್ಟ ಬುತ್ತಿ. ಕಣ್ಣಿಗೆ ಅಸ್ಪಷ್ಟವಾಗಿ ಕಾಣೋ ನೈಲಾನ್ ಹಗ್ಗದ ಬದಲು, ಸ್ಪಷ್ಟವಾಗಿ ಗೋಚರಿಸಬಲ್ಲ ರಿಬ್ಬನ್ ಮಾದರಿಯ ಹಗ್ಗಗಳು ಅಳವಡಿಸಿದ್ರೆ ಅಪಾಯ ದೂರ ಆಗ್ಬಹುದು ಅನ್ನೋ ಅಭಿಪ್ರಾಯ  ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Related posts

Leave a Reply