Header Ads
Header Ads
Breaking News

ಟೆಂಪೋ ಚಾಲಕನ ಕೊಲೆಯತ್ನ ನಾಲ್ವರ ಬಂಧನ

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಜಾದ್ ನಗರದಲ್ಲಿ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ಮೇಲಂಗಡಿಯ ಜಲಾಲ್ ಯಾನೆ ಜಲಾಲುದ್ದೀನ್, ಕುಂಪಲ ಶಾಲೆ ಬಳಿಯ ಅರ್ಫಾನ್ ಯಾನೆ ಅಪ್ಪು , ಉಳ್ಳಾಲ ಟಿ.ಸಿ.ರೋಡಿನ ಜಾಫರ್ ಸಾದಿಕ್ , ಕೆ.ಸಿ.ರೋಡ್ ತಲಪಾಡಿಯ ಮುಝಂಬಿಲ್ ಬಂಧಿತರು.
ಇನ್ನು ಜು.೧೧ರಂದು ಆಸ್ಟಿಮ್ ನಿತೇಶ್ ಮೊಂತೆರೋ ಎಂಬವರು ಉಳ್ಳಾಲ ಅಜಾದ್ ನಗರದ ಕಿರಿದಾದ ರಸ್ತೆಯಲ್ಲಿ ಅವರ ರಿಕ್ಷಾ ಟೆಂಪೋವನ್ನು ನಿಲ್ಲಿಸಿ ಟೆಂಪೋ ರಿಕ್ಷಾದಿಂದ ಮಣ್ಣಿನ ಲೋಡನ್ನು ಖಾಲಿ ಮಾಡುತ್ತಿದ್ದ ಸಮಯ ಅದೇ ರಸ್ತೆಯಿಂದಾಗಿ ಬಂದ ಕಪ್ಪು ಬಣ್ಣದ ಕಾರೊಂದರಲ್ಲಿ ೪ ಮಂದಿ ವ್ಯಕ್ತಿಗಳು ಟೆಂಪೋ ರಿಕ್ಷಾವನ್ನು ರಸ್ತೆಯಿಂದ ತೆಗೆಯುವಂತೆ ಜೋರು ಮಾಡಿದ್ದರು. ನಂತರ ರಿಕ್ಷಾಕ್ಕೆ ಅಡ್ಡ ನಿಂತು ಅವರಿಗೆ ಕೈಯಿಂದ ಹಲ್ಲೆ ನಡೆಸಿರುವುದಲ್ಲದೇ ಅವರ ಕಾರಿನ ಸೀಟಿನಲ್ಲಿದ್ದವನು ಕಾರಿನಿಂದ ಚೂರಿಯೊಂದನ್ನು ತೆಗೆದುಕೊಂಡು ಬಂದು ಅಸ್ಟಿಮ್ ನಿತೇಶ್ ಮೊಂತೆರೋ ರವರಿಗೆ ಚೂರಿಯಿಂದ ಕೈಗೆ ಇರಿದು, ನಂತರ ಎದೆಗೆ ಇರಿಯಲು ಪ್ರಯತ್ನಿಸಿದ ಸಮಯ ಅಸ್ಟಿಮ್ ನಿತೇಶ್ ಮೊಂತೆರೋ ರವರು ಅವರಿಂದ ಓಡಿ ತಪ್ಪಿಸಿಕೊಂಡಿದ್ದರು. ಗಾಯಗೊಂಡ ಅಸ್ಟಿಮ್ ನಿತೇಶ್ ಮೊಂತೆರೋ ರವರು ಉಳ್ಳಾಲದ ಸರೋಜ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಪ್ಪು ಬಣ್ಣದ ಆಲ್ಟೋ ಕಾರು ಹಾಗೂ ಪರಾರಿಯಾಗಲು ಯತ್ನಿಸಿದ್ದ ಇನ್ನೊಂದು ಆಲ್ಟೋ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ
ಉಳ್ಳಾಲ

Related posts

Leave a Reply