Header Ads
Header Ads
Header Ads
Breaking News

ಟೋಪ್ಕೋ ಝಂ ಝಂ ಜ್ಯುವೆಲ್ಲರಿಯಿಂದ ‘ವಿವಾಹ’ ಯೋಜನೆ

ಪುತ್ತೂರು ಕೋರ್ಟ್ ರಸ್ತೆಯ ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿಯಲ್ಲಿ ಪ್ರಾರಂಭಿಸಲಾದ ವಿನೂತನ ಯೋಜನೆ “ವಿವಾಹ” ಬಂಗಾರ ಉಳಿತಾಯ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವ್ರು, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಟೋಪ್ಕೊ ಝಂ ಝಂ ಜ್ಯುವೆಲ್ಲರಿ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಶುಭಾ ಹಾರೈಸಿದ್ರು.

“ವಿವಾಹ” ಬಂಗಾರ ಉಳಿತಾಯ ಯೋಜನೆಗೆ ಉದ್ಘಾಟನೆ ಸಂದರ್ಭದಲ್ಲಿ ಸದಸ್ಯರಾದ ವಸಂತಿ ಉಜ್ರುಪಾದೆ, ಯೂಸುಫ್ ಅಲಿ ನೇರಳಕಟ್ಟೆ, ಸಿರಿಲ್ ವೇಗಸ್ ಕಲ್ಲಾಜೆ ಸಹಿತ ೭೦ ಮಂದಿ ಸದಸ್ಯರಿಗೆ ಮುಖ್ಯ ಅತಿಥಿಗಳು ವಿವಾಹ ಸದಸ್ಯತನ ಕಾರ್ಡ್ ವಿತರಿಸಿ, ವಿಶೇಷ ಗಿಫ್ಟ್ ನೀಡಿದರು.

ಟೋಪ್ಕೋ ಝಂ ಝಂ ಜ್ಯುವೆಲ್ಲರಿಯ ನೂತನ ವಿವಾಹ ಯೋಜನೆಗೆ ಆಕರ್ಷಿತರಾಗಿ ಮುಖ್ಯ ಅತಿಥಿಗಳಾದ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಗರಸಭೆ ಸದಸ್ಯೆ ಝೊಹರಾ ನಿಸಾರ್ ಅಹ್ಮದ್, “ಎಂ.ಫ್ರೆಂಡ್ಸ್” ಕಾರ್ಯದರ್ಶಿ ರಶೀದ್ ವಿಟ್ಲ, “ಏಡ್ ಮೀಡಿಯಾ” ಮಾಲಕ ಆರ್.ಸಿ.ನಾರಾಯಣ ಅವರು ಇದೇ ಸಂದರ್ಭದಲ್ಲಿ ಸದಸ್ಯರಾದರು.

ಈ ಸಂದರ್ಭದಲ್ಲಿ ಪುತ್ತೂರು ರಾಧಾಸ್ ಜವಳಿ ಮಳಿಗೆಯ ವ್ಯವಸ್ಥಾಪಕ ಸಂಜಯ್, ಟೋಪ್ಕೋ ಝಮ್ ಝಮ್ ಗ್ರೂಪ್ ನ ವ್ಯವಸ್ಥಾಪಕ ಸಹೀರ್ ಅಹ್ಮದ್, ಮೆನೇಜರ್ ಅಲ್ ಸಬರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅನೀಶ್ ಪುತ್ತೂರು

Related posts

Leave a Reply