Header Ads
Header Ads
Breaking News

ಟೋಲ್‌ಗೇಟ್ ಬಗ್ಗೆ ಪಿಡಬ್ಲ್ಯೂಡಿ ಸಚಿವರು ಕರೆದ ಸಭೆ:ಸಭೆಗೆ ಹಾಜರಾಗದೆ ಕರ್ತವ್ಯ ಮರೆತ ಸಂಸದೆ ಮತ್ತು ಶಾಸಕ

ಟೋಲ್‌ಗೇಟ್ ಬಗ್ಗೆ ಪಿಡಬ್ಲ್ಯೂಡಿ ಸಚಿವರು ಕರೆದ ಸಭೆಗೆ ಹಾಜರಾಗದೆ ತಮ್ಮ ಕರ್ತವ್ಯವನ್ನು ಮರೆತ ಸಂಸದೆ ಹಾಗೂ ಶಾಸಕರ ಬಗ್ಗೆ ಹೆದ್ದಾರಿ ಹೋರಾಟ ಸಮಿತಿ ಬಹಳಷ್ಟು ಬೇಸರ ಹೊಂದಿದ್ದು, ನಮ್ಮ ಹೋರಾಟಕ್ಕೆ ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲ ಕೆಲ ಜನಪ್ರತಿನಿಧಿಗಳಿಂದಲೂ ನಾವು ಹಿನ್ನಡೆ ಅನುಭವಿಸುವಂತ್ತಾಗಿದೆ ಎಂಬುದಾಗಿ ಹೋರಾಟ ಸಮಿತಿಯ ಉಪಾಧ್ಯಕ್ಷ ಗುಲಾಂ ಮಹಮ್ಮದ್ ಹೇಳಿದ್ದಾರೆ.

ಕಳೆದ ನ.28ನೇ ತಾರೀಕಿನಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲರವರು ಜಿಲ್ಲೆಯಲ್ಲಿ ಟೋಲ್ ಬಗ್ಗೆ ಸಭೆಯೊಂದನ್ನು ಕರೆದಿದ್ದರು, ಆದರೆ ಆ ಸಭೆ ಮಾಜಿ ಸಚಿವ ಅಂಬರೀಶ್ ನಿಧನದಿಂದ ಡಿ.೧ನೇ ತಾರೀಕಿಗೆ ಎಂಬುದಾಗಿ ಮುಂದೂಡಲ್ಪಟ್ಟಿತ್ತಾದರೂ, ಇದೀಗ ಆ ಸಭೆಯನ್ನು ರದ್ದು ಪಡಿಸಲಾಗಿದೆ ಎಂಬ ವಿಷಯ ಹೋರಾಟ ಸಮಿತಿಯ ಗಮನಕ್ಕೆ ಬಂದಿದೆ. ಜಿಲ್ಲೆಯ ಜನರ ಯಾವುದೇ ಸಮಸ್ಯೆಗೆ ಸ್ಪಂಧಿಸದ ಇಂಥಹ ಜನಪ್ರತಿನಿಧಿಗಳ ಬಗ್ಗೆ ನಂಬಿಕೆ ಇರಿಸಿದರೆ ನಾವು ದಡ ಸೇರಲು ಸಾಧ್ಯವಿಲ್ಲ, ಬೆಂಗಳೂರಿನಲ್ಲಿ ಇದ್ದರೂ ಪಿಡ್ಲ್ಯೂಡಿ ಸಚಿವರು ಕರೆದ ಸಭೆಗೆ ಹೋಗದ ಸಂಸದೆ-ಶಾಸಕರು, ಕೊಂಚ ಸಮಾಧಾನವೆಂದರೆ ಉಡುಪಿ ಭಾಗದ ಸಮಸ್ಯೆಗೆ ಸ್ಪಂದಿಸಿ ಆ ಭಾಗದ ಶಾಸಕ ರಘುಪತಿ ಭಟ್ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಸಭೆಗೆ ಹಾಜರಾಗಿರುವುದು.

ಆ ನಿಟ್ಟಿನಲ್ಲಿ ಶೀಘ್ರವಾಗಿ ಸಾರ್ವಜನಿಕ ಸಭೆಯೊಂದನ್ನು ಕರೆದು ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಿ. ಯಾವುದೇ.. ಯಾರದ್ದೇ ಒತ್ತಡಕ್ಕೆ ಮಣಿಯದೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಇಷ್ಟರಲ್ಲೇ ಕೆಲ ವಾಹನ ಗುಂಪುಗಳಿಗೆ ಟೋಲ್ ಉಚಿತ ಮಾಡುವುದಾಗಿ ನಂಬಿಸಿ ಅವರಿಂದ ವಾಹನಗಳ ನೋಂದಾಣಿ ಸಂಖ್ಯೆಯನ್ನು ಕಂಪನಿಯೊಂದಿಗೆ ಮಧ್ಯಸ್ಥಿವಹಿಸಿದ ಪೊಲೀಸ್ ಇಲಾಖೆ ಹೇಳಿದೆ ಎಂಬ ಮಾಹಿತಿ ಇದೆ. ಇದು ನಮ್ಮ ಹೋರಾಟವನ್ನು ಹತ್ತಿಕ್ಕುವ ತಂತ್ರವಲ್ಲದೆ ಬೇರೇನೂ ಅಲ್ಲ. ಉಚಿತ ಮಾಡಿದರಾದರೂ ಕೆಲವೇ ದಿನಗಳಿಗಷ್ಟೇ ಮೀಸಲು ಎಂಬುದಾಗಿ ಗುಲಾಂ ಮಹಮ್ಮದ್ ಎಚ್ಚರಿಸಿದ್ದಾರೆ

Related posts

Leave a Reply