Header Ads
Breaking News

ಟೋಲ್‍ಗೇಟ್‍ನಲ್ಲಿ ಸ್ಥಳೀಯರಿಗೆ ವಿನಾಯಿತಿ : ಸರ್ವ ಪಕ್ಷ ಹಾಗೂ ಪ್ರೆಸ್‍ಕ್ಲಬ್ ಪ್ರತಿನಿಧಿಗಳಿಂದ ಸಂಸದರಿಗೆ ಮನವಿ

ಮಂಜೇಶ್ವರ : ಡಿಸೆಂಬರ್ 15ರಂದು ದೇಶದ ಎಲ್ಲ ಟೋಲ್‍ಗಳಲ್ಲಿ ಫಾಸ್ಟ್ ಟ್ಯಾಗ್ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಟೋಲ್‍ಗೇಟ್‍ನಲ್ಲಿ ಆಸುಪಾಸಿನ ಐದು ಕಿಲೋ ಮೀಟರ್ ಆಸುಪಾಸಿನ ಜನರಿಗೆ ಈ ಮೊದಲು ನೀಡಿದಂತೆ ವಿನಾಯಿತಿಯನ್ನು ಮುಂದುವರಿಸಬೇಕು ಎಂಬ ವಿನಂತಿ ಪತ್ರವನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ಮಂಜೇಶ್ವರದ ಸರ್ವ ಪಕ್ಷ ನೇತಾರರು ಹಾಗೂ ಪ್ರೆಸ್‍ಕ್ಲಬ್ ಪ್ರತಿನಿಧಿಗಳು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಅವರ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭ ಪ್ರತಿಕ್ರಿಯಿಸಿದ ಸಂಸದರು ಇದೇ ತಿಂಗಳು 17ಕ್ಕೆ ಟೋಲ್ ಗುತ್ತಿಗೆದಾರರ ಸಭೆ ಕರೆದಿರುವುದಾಗಿಯೂ ಅಷ್ಟರ ತನಕ ಮೊದಲಿನ ರೀತಿಯಲ್ಲಿಯೇ ಶುಲ್ಕ ನೀಡದೆ ಪ್ರಯಾಣವನ್ನು ಮುಂದುವರಿಸುವಂತೆ ನೇತಾರರರಿಗೆ ನಿರ್ದೇಶನ ನೀಡಿದ್ದಾರೆ. ಅದೇ ರೀತಿ ರಾ. ಹೆದ್ದಾರಿ ಪ್ರಾಧಿಕಾರದವರಲ್ಲಿಯೂ ಅಸು ಪಾಸಿನ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಜನತೆಗೆ ಸಹಕರಿಸುವಂತೆಯೂ ನಿರ್ದೇಶಿಸಿದ್ದಾರೆ. ಸಂಸದರ ಭಾಗದಿಂದ ಯಾವುದೇ ಪ್ರತಿಕ್ರಿಯೆ ಇಲವಾಗಿದ್ದರೆ ನಾಳೆಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಸರ್ವ ಪಕ್ಷ ತೀರ್ಮಾನಿಸಿತ್ತು.

ಸಂಸದರನ್ನು ಭೇಟಿಯಾಗಲು ತೆರಳಿದ ನಿಯೋಗದಲ್ಲಿ ಹೋರಾಟ ಸಮಿತಿ ಮುಖಂಡರಾದ ಹರ್ಷಾದ್ ವರ್ಕಾಡಿ, ಸೈಫುಲ್ಲಾ ತಂಘಳ್, ಬಿಜೆಪಿ ನೇತಾರ ಹರೀಶ್ ಚಂದ್ರ ಮಂಜೇಶ್ವರ, ನ್ಯಾಯವಾದಿ ನವೀನ್ ರಾಜ್, ತುಳಸೀದಾಸ್, ರಾಜೇಶ್ ತೂಮಿನಾಡು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *