Header Ads
Header Ads
Header Ads
Breaking News

ಟ್ಯಾಂಕರ್ ಲಾರಿಯಿಂದ ಹೈಡ್ರೋಲಿಕ್ ಆಸಿಡ್ ಸೋರಿಕೆ: ಅಗ್ನಿಶಾಮಕದಳ ದ ಸಕಾಲಿಕ ಕಾರ್ಯಾಚರಣೆ: ತಪ್ಪಿದ ಭಾರೀ ದುರಂತ

ಮಂಜೇಶ್ವರ: ಹೈಡ್ರೋಲಿಕ್ ಆಸಿಡ್ ಹೇರಿ ಕೊಂಡು ಕರವಾರದಿಂದ ಕೊಚ್ಚಿಗೆ ತೆರಳುತಿದ್ದ ಟ್ಯಾಂಕರ್ ಲಾರಿಯಿಂದ ಸೋರಿಕೆಯಾಗುತ್ತಿರುವುದು ತಕ್ಷಣವೇ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತಲಪಾಡಿ ಅರ್ ಟಿ ಓ ಅಧಿಕಾರಿಗಳು ಅಗ್ನಿಶಾಮಕ ದಳಕ್ಕೆ ನೀಡಿದ ಮಾಹಿತಿಯಂತೆ ಆಗಮಿಸಿದ ಅಗ್ನಿಶಾಮಕ ದಳ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಕಾಲಿಕ ಕಾರ್ಯಾಚರಣೆಯಿಂದ ತಲಪಾಡಿಯಲ್ಲಿ ಭಾರೀ ಒಂದು ದುರಂತ ತಪ್ಪಿ ಹೋಗಿದೆ.

ಟ್ಯಾಂಕರ್ ಲಾರಿ ತಲಪಾಡಿ ಟೋಲ್ ಗೇಟ್ ನಲ್ಲಿ ನಿಂತಿರುವಾಗ ಬೇರೊಂದು ವಾಹನ ಚಾಲಕನಿಗೆ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್ ಚಾಲಕ ಗಡಿ ಪ್ರದೇಶದಲ್ಲಿರುವ ಕೇರಳ ಆರ್ ಟಿ ಓ ತಪಾಸಣಾ ಕೇಂದ್ರದ ಬಳಿ ನಿಲ್ಲಿಸಿದಾಗ ಅಲ್ಲಿಗೆ ಆಗಮಿಸಿದ ಉಪ್ಪಳ ಅಗ್ನಿಶಾಮಕದಳ ಸಿಬ್ಬಂಧಿಗಳು ಬೇರೊಂದು ಜೆಸಿಬಿ ಯನ್ನು ತರಿಸಿ ಅಲ್ಲೇ ಸಮೀಪದಲ್ಲಿ ಹೊಂಡವನ್ನು ತೆಗೆದು ಸುತ್ತಲೂ ಮಣ್ಣು ತುಂಬಿಸಿ ಸೋರಿಕೆಯಾಗುತ್ತಿರುವ ಹೈಡ್ರೋಲಿಕ್ ಆಸಿಡನ್ನು ಹೊಂಡಕ್ಕೆ ಸುರಿಸಿದ್ದಾರೆ. ಟ್ಯಾಂಕರಿನಲ್ಲಿ ೨೦ ಟನ್ ಪ್ರಮಾಣದ ಹೈಡ್ರೋಲಿಕ್ ಆಸಿಡನ್ನು ತುಂಬಿಸಲಾಗಿತ್ತು. ಸೋರಿಕೆಯಾಗುತ್ತಿರುವುದು ಚಾಲಕನ ಗಮನಕ್ಕೆ ಬರದೇ ಇರುತಿದ್ದರೆ ಭಾರೀ ಒಂದು ದುರಂತ ಸಂಭವಿಸಲು ಸಾಧ್ಯವಿತ್ತೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related posts

Leave a Reply