Header Ads
Header Ads
Breaking News

ಟ್ಯಾರೀಸ್ ಮೇಲೆ ಮಲ್ಲಿಗೆ ಕೃಷಿ:ಕೃಷಿಯ ಪ್ರಯೋಗದ ಮೂಲಕ ಲಾಭ ಪಡೆದ ಮಹಿಳೆ

 ಕೃಷಿ ಅಂದ ಕೂಡಲೇ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಕೃಷಿ ಅನ್ನೋ ಪ್ರಯೋಗ ಲಾಭದ ಕಡೆ ಮನಸ್ಸು ಮಾಡಿದರೆ ಮಹಿಳೆ ಕೂಡಾ ಯಶಸ್ಸು ಸಾಧಿಸಲು ಸಾಧ್ಯ ಅನ್ನೋದನ್ನು ಈ ಮಹಿಳೆ ತೋರಿಸಿ ಕೊಟ್ಟಿದ್ದಾರೆ. ಟ್ಯಾರೀಸ್ ಮೇಲೆ ಮಲ್ಲಿಗೆ ಬೆಳೆದು ಮಲ್ಲಿಗೆ ಕೃಷಿಯ ಪರಿಮಳವನ್ನು ಎಲ್ಲೆಡೆ ಪಸರಿಸೋ ಕಾರ್ಯ ಮಾಡಿದ್ದಾರೆ.ಹೀಗೆ ಮನೆಯ ಟ್ಯಾರೀಸ್ ಮೇಲೆ ಮಲ್ಲಿಗೆ ಗಿಡದ ಆರೈಕೆ ಮಾಡ್ತಾ ಇರೋ ಈ ಮಹಿಳೆ ಹೆಸರು ಕುಂಭಾಸಿ ಪಣ್‌ಹತ್ವಾರ್‌ಬೆಟ್ಟಿನ ನಿವಾಸಿ ಪ್ರೇಮ. ಕೃಷಿ ಪ್ರಧಾನ ಕುಟುಂಬದಲ್ಲಿ ಹುಟ್ಟಿ ಬೆಳೆದ ಪ್ರೇಮ ಅವರಿಗೆ ಅದ್ಯಾಕೋ ತವರು ಮನೆಯಲ್ಲಿ ಬೆಳೆಸಿಕೊಂಡ ಬಂದ ಮಲ್ಲಿಗೆ ಕೃಷಿ ಅಂದ್ರೆ ಪಂಚ ಪ್ರಾಣ. ಮದುವೆಯಾಗಿ ಬಂದ ಮೇಲೂ ಅವರ ಮಲ್ಲಿಗೆ ಪ್ರೇಮ ಗಂಡನಮನೆಯಲ್ಲೂ ಬಿಡಲಿಲ್ಲ. ತವರಿನಲ್ಲಿ ಪರಂಪರಿಕವಾಗಿ ಮಾಡುತ್ತಿದ್ದ ಮಲ್ಲಿಗೆಯ ನಂಟು ಅವರನ್ನು ನೆನಪಿಸುತ್ತಲೇ ಇತ್ತು. ಆದರೆ ಪತಿ ಮನೆಯಲ್ಲಿ ಮಲ್ಲಿಗೆ ಕೃಷಿಗೆ ಸ್ಥಳಾವಕಾಶದ ಕೊರತೆ ಕಾಡಿದಾಗ ಅವರ ಆಲೋಚನಾ ಲಹರಿ ಹರಿದಿದ್ದು ಟೆರೆಸ್ ಮೇಲಿನ ಖಾಲಿ ಜಾಗದತ್ತ. ಸುಮಾರು ೧೦೦ಕ್ಕೂ ಹೆಚ್ಚು ಕುಂಡಗಳನ್ನು ಖರೀದಿಸಿ ತಂದು ಅದಕ್ಕೆ ಮಣ್ಣು-ಸುಡುಮಣ್ಣು-ಸಾವಯವ ಪದಾರ್ಥಗಳನ್ನು ಮಿಶ್ರಣ ಮಾಡಿ ತಾಯಿ ಮನೆಯಿಂದ ಮಲ್ಲಿಗೆ ಗಿಡ ತಂದು ನಾಟಿ ಮಾಡಿಯೇ ಬಿಟ್ಟರು. ದಿನಕ್ಕೆರಡು ಬಾರಿ ನೀರುಣಿಸಿದರು. ಪ್ರೇಮದಿಂದ ಆರೈಕೆ ಮಾಡಿದ್ದೇ ತಡ ವರ್ಷದೊಳಗೆ ಮನೆ ಮಹಡಿಯಲ್ಲಿ ಮಲ್ಲಿಗೆ ಘಮ್ಮೆಂದುಬಿಟ್ಟಿದೆ.

 ಮಹಿಳೆಯಾಗಿ ಸಾಧನೆ ಮಾಡಬೇಕು ಎನ್ನುವವರಿಗೆ ಈ ಗೃಹಿಣಿ ಒಳ್ಳೆಯ ಉದಾಹಣೆ. ಇವತ್ತು ಮನೆಯ ಟೆರೆಸ್ ಮೇಲೆ1200ಚದರ ಅಡಿ ಪ್ರದೇಶದಲ್ಲಿ ಸಮೃದ್ದವಾಗಿ ಬೆಳೆದಿರುವ 110 ಕ್ಕೂ ಹೆಚ್ಚು ಮಲ್ಲಿಗೆ ಗಿಡಗಳು ಹೂ ಬಿಡುತ್ತಿವೆ. ಈ ಸಮಯದಲ್ಲಿ ಕನಿಷ್ಠ 2-3 ಸಾವಿರ ಹೂ ಸಿಗುತ್ತಿವೆ. ಒಳ್ಳೆಯ ಧಾರಣೆಯೂ ಸಿಗುತ್ತಿದೆ. ಉಪ ಕಸುಬಾಗಿಯೂ ಆರ್ಥಿಕ ಶಕ್ತಿಯನ್ನು ಜಾಸ್ಮಿನ್ ಪ್ರೇಮ ಕುಟುಂಬಕ್ಕೆ ಆಸರೆಯಾಗಿದೆ. ಮಲ್ಲಿಗೆ ಕೃಷಿಯ ಜೊತೆಗೆ ಗಿಡಗಳ ತಯಾರಿಸಿ, ಮಾರಾಟವನ್ನು ಮಾಡುತ್ತಿದ್ದಾರೆ. ಮಲ್ಲಿಗೆ ಕೃಷಿ ಮಾಡುವಂತೆ ಕುಟುಂಬಿಕರಿಗೆ ಸಲಹೆಯನ್ನು ನೀಡುತ್ತಿದ್ದಾರೆ. ಆದರಿಂದ ಅವರ ಕುಟುಂಬದ ಬಹುತೇಕರು ಮಲ್ಲಿಗೆ ಕೃಷಿ ನಿರತರಾಗಿದ್ದಪುಷ್ಪ ಕೃಷಿ ಒಂದು ರೀತಿ ಖುಷಿ, ಆಹ್ಲಾದನೀಯತೆ ನೀಡುತ್ತದೆ ಎನ್ನುವ ಇವರು ಮಲ್ಲಿಗೆಯಲ್ಲಿ ಸೀಸನ್ ಸಮಯದಲ್ಲಿ 10 ಸಾವಿರದ ತನಕ ಹೂವು ಪಡೆಯುತ್ತಾರೆ. ಸಾವಯವ ವಿಧಾನ ಅನುಸರಣೆಯಿಂದ ರೋಗ-ಕೀಟ ಬಾಧೆ ಕಡಿಮೆ ಇದ್ದು ಗುಣಮಟ್ಟದ ಹೂವು ಸಿಗುತ್ತದೆ ಅನ್ನೋ ಪ್ರೇಮ ಬಹಳಷ್ಟು ಮಂದಿಗೆ ಮಲ್ಲಿಗೆ ಕ್ರಷಿಯ ಮಾಹಿತಿ ಜೊತೆ ಮಲ್ಲಿಗೆ ಗಿಡವನ್ನು ಕೂಡಾ ರೆಡಿ ಮಾಡೊ ಕೊಡೋ ಕಾಯಕವನ್ನು ಮಾಡ್ತಾರೆ.

 ಒಟ್ಟಿನಲ್ಲಿ ಪ್ರೇಮ ಗಣೇಶ ಪೂಜಾರಿ ಅವರ ಜಾಸ್ಮಿನ್ ಕಹಾನಿ ಮಾರ್ಗದರ್ಶಿಯಂತಿದೆ. ಎಕರೆಗಟ್ಟಲೆ ಜಮೀನು ಇದ್ದು ಹಡಿಲು ಬಿಡುವವರ ನಡುವೆ ಮನೆಯ ತಾರೆಸಿ ಮೇಲೇಯೇ ಮಲ್ಲಿಗೆ ಕೃಷಿ ಮಾಡಿ ಪ್ರಗತಿಯ ದಾರಿ ಕಂಡುಕೊಂಡಿರುವುದು ಆರ್ಥಿಕ ಸ್ವಾವಲಂಬನೆಗೊಂದು ಮಾದರಿಯಾಗಿದೆ.

Related posts

Leave a Reply