Header Ads
Header Ads
Breaking News

ಟ್ರಂಪ್ ನಟನೊಬ್ಬನಿಂದ ಕೊಲೆಯಾಗಲಿ, ಹಾಲಿವುಡ್ ನಟ ಡೆಪ್ ವಿವಾದದ ಹೇಳಿಕೆ

ಅಬ್ರಾಹಂ ಲಿಂಕನ್ ಒಬ್ಬ ನಟನಿಂದ ಹತ್ಯೆಯಾದ ರೀತಿಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹತ್ಯೆಯಾಗಲಿ, ಅದೂ ಒಬ್ಬ ನಟನಿಂದಲೇ ಎಂದು ಹೇಳುವ ಮೂಲಕ ಹಾಲಿವುಡ್ ನಟ ಜಾನಿ ಡೆಪ್ ವಿವಾದ ಸೃಷ್ಟಿಸಿದ್ದಾರೆ. ೧೮೬೫ರಲ್ಲಿ ನಟ ಜಾನ್ ವಿಲ್ಕಿಸ್ ಬೂಥ್, ಅಬ್ರಾಹಂ ಲಿಂಕನ್ ಅವರನ್ನು ಹತ್ಯೆ ಮಾಡಿದ್ದ ಎಂದು ಡೆಫ್ ಹೇಳಿದ್ದಾರೆ.
ಅಯ್ವತ್ತನಾಲ್ಕು ವರ್ಷದ ಡೆಪ್ ಲಂಡನ್ನಲ್ಲಿ ನಡೆದ ಗ್ಲಾಸ್ಟೋನ್ಬರಿ ಮ್ಯೂಸಿಕ್ ಫೆಸ್ಟಿವಲ್ನಲ್ಲಿ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ ಅಲ್ಲಿ ನೆರೆದಿದ್ದ ಜನರಿಗೆ ನೀವು ಟ್ರಂಪ್ ಅವರನ್ನು ಇಲ್ಲಿಗೆ ಕರೆತರುತ್ತೀರಾ? ಇಲ್ಲಿ ತುಂಬಾ ಕತ್ತಲಿದೆ, ಇಂಥ ಸ್ಥಳಗಳಿಗೇ ಟ್ರಂಪ್ ಹೋಗಬೇಕಾಗಿರುವುದು ಎಂದು ಹೇಳಿದ್ದಾರೆ. ಜಾನಿ ಡೆಪ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅವರು ಅಭಿನಯಿಸಿದ ಚಿತ್ರಗಳನ್ನು ಬಹಿಷ್ಕರಿಸುವಂತೆ ಟ್ವಿಟರಾರ್ಥಿಗಳು ಕರೆ ನೀಡಿದ್ದಾರೆ. ಅಲ್ಲದೆ ಟ್ರಂಪ್ ಪುತ್ರ ಜೂನಿಯರ್ ಟ್ರಂಪ್, ಹಾಲಿವುಡ್ ನಟ ಜಾನಿ ಡೆಪ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Related posts

Leave a Reply