Header Ads
Header Ads
Breaking News

ಟ್ರಾನ್ಸ್‌ಜಂಡರ್ ಬಿಲ್ ವಾಪಾಸ್‌ಗೆ ಆಗ್ರಹ : ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ

ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಬಿಲ್ – 2018ಹಕ್ಕುಗಳ ರಕ್ಷಣೆ ಕಾಯ್ದೆಯನ್ನ ವಿರೋಧಿಸಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳಮುಖಿಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಟ್ರಸ್ಟ್ ಕಾರ್ಯದರ್ಶಿ ಸಂಜನಾ ಮಾತನಾಡಿ, ಈ ಬಿಲ್ ಜಾರಿಗೆ ಬಂದರೆ ಮಂಗಳಮುಖಿಯರಿಗೆ ತುಂಬಾ ತೊಂದರೆ ಆಗುತ್ತೆ, ಚುನಾವಣೆ ಬಂದಾಗ ಯಾವಾರಿಸಿ ಮತ ಹಾಕಿಸಿಕೊಳ್ಳುತ್ತೀರಿ, ಕೇಂದ್ರ ಸರ್ಕಾರಕ್ಕೆ ಮಂಗಳಮುಖಿಯರ ಮತ ಬೇಕು. ಅದ್ರೆ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ . ಈ ಕೂಡಲೇ ಈ ಬಿಲ್ ಅನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಈ ವೇಳೆ ಹಲವು ಮಂದಿ ಮಂಗಳಮುಖಿಯರು ಪಾಲ್ಗೊಂಡಿದ್ರು.

Related posts

Leave a Reply