Header Ads
Breaking News

ಟ್ರಾನ್ಸ್ ಫಾರ್ಮರ್ ಹತ್ತಿರ ಸುಳಿದವರಿಗೆ ಅಪಾಯ ತಪ್ಪಿದ್ದಲ್ಲ : ಕಣ್ಣಿದ್ದೂ ಜಾಣ ಕುರುಡುರಾದ ವಿದ್ಯುತ್ ಅಧಿಕಾರಿಗಳು

ಮಂಜೇಶ್ವರ: ಮಂಜೇಶ್ವರ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿರುವ ಟ್ರಾನ್ಸ್ ಫಾರ್ಮರೊಂದು ಕಾಡು ಪೊದರಿನೊಳಗೆ ಅವಿತು ನಿಂತಿದೆ. ಅರಿತೋ ಅರಿಯದೆಯೋ ಇದರ ಹತ್ತಿರ ಸುಳಿದವರಿಗೆ ಪ್ರಾಣಾಪಾಯ ತಪ್ಪಿದ್ದಲ್ಲ. ಈ ಬಗ್ಗೆ ಸ್ಥಳೀಯರು ಮಂಜೇಶ್ವರ ಸೆಕ್ಷನ್ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲವೆನ್ನಲಾಗಿದೆ. ಕೇರಳ ಕರ್ನಾಟಕ ಗಡಿ ಭಾಗದ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಟ್ರಾನ್ಸ್ ಫಾರ್ಮರ್ ಈ ಅವಸ್ಥೆಯಲ್ಲಿದೆ

ಟ್ರಾನ್ಸ್ ಫಾರ್ಮರಿನಲ್ಲಿರುವ ಫ್ಯೂಸ್‌ಗಳೆಲ್ಲವನ್ನೂ ಪೊದರುಗಳು ಆವರಿಸಿಕೊಂಡಿವೆ. ಅತ್ಯವಶ್ಯಕ್ಕೆ ಏನಾದರೂ ವದ್ಯುತ್‌ನ್ನು ವಿಚ್ಛೇದಿಸಲು ಇಲ್ಲಿಗೆ ಆಗಮಿಸಿದವರಿಗೆ ಅಪಾಯ ತಪ್ಪಿದ್ದಲ್ಲ. ವಿದ್ಯುತ್ ಸಿಬ್ಬಂದಿಗಳು ಕೂಡಾ ಏನಾದರೂ ಅಗತ್ಯಕ್ಕೆ ಈ ಟ್ರಾನ್ಸ್ ಫಾರ್ಮರಿನ ಬಳಿ ಆಗಮಿಸಿದರೆ ಮೊದಲು ಕಾಡು ಪೊದರುಗಳನ್ನು ತೆಗೆಯದೆ ಒಳಪ್ರವೇಶಿಸಲು ಸಾಧ್ಯವಿಲ್ಲ. ಮಂಜೇಶ್ವರ ಸೆಕ್ಷನ್ ವ್ಯಾಪ್ತಿಯಲ್ಲಿರುವ ಹಲವು ಟ್ರಾನ್ಸ್ ಫಾರ್ಮರ್ಗಳು ಈ ರೀತಿಯಾಗಿಯೇ ಇರುವುದಾಗಿ ಪರಿಸರವಾಸಿಗಳು ಹೇಳುತ್ತಿದ್ದಾರೆ. ಟ್ರಾನ್ಸ್ ಫಾರ್ಮರಿಗಾಗಿ ಭೂಮಿಯ ಅಡಿಯಲ್ಲಿ ಅಳವಡಿಸಲಾಗಿರುವ ಅರ್ಥ್ ಕೇಬಲ್‌ಗಳನ್ನು ಕೂಡಾ ಕಾಡು ಪೊದರುಗಳು ಆವರಿಸಿಕೊಂಡಿದೆ. ಇದು ೧೧೦ ಕೆ ವಿ ವಿದ್ಯುತ್ ಪ್ರವಹಿಸುವ ಟ್ರಾನ್ಸ್ ಫಾರ್ಮರಾಗಿದೆ. ಅಪಘಡಗಳು ಸಂಭವಿಸಿದ ಬಳಿಕ ಎಚ್ಛೆತ್ತುಕೊಳ್ಳುವ ಹವ್ಯಾಸವನ್ನು ರೂಢಿಯಾಗಿರಿಸಿರುವ ಮಂಜೇಶ್ವರ ವಿದ್ಯುತ್ ಅಧಿಕಾರಿಗಳ ಆಲಸ್ಯದ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸಂಬಂಧಪಟ್ಟವರು ಕೂಡಲೇ ಸ್ಪಂಧಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಗೆ ಸಜ್ಜಾಗುವುದಾಗಿ ಊರವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *