Breaking News

ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಟ್ಟು ನಿಂತ ಕಾರು ಕರ್ತವ್ಯ ನಿಷ್ಠೆ ತೋರಿಸಿದ ಟ್ರಾಫಿಕ್ ಪೊಲೀಸ್

ಟ್ರಾಫಿಕ್ ಸಿಗ್ನಲ್‌ನಲ್ಲಿ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತ ಕಾರನ್ನು ರಸ್ತೆಯ ಬದಿಗೆ ತರುವಲ್ಲಿ ಸಹಕರಿಸಿ, ಕರ್ತವ್ಯ ನಿಷ್ಠೆಯನ್ನು ತೋರಿಸಿದ್ರು, ಹಾಗಾದ್ರೆ ಆ ಟ್ರಾಫಿಕ್ ಪೊಲೀಸ್ ಯಾರು ಎಂಬ ಕುತೂಹಲ ನಿಮ್ಮಗಿದೇಯೇ , ಹಾಗಾದ್ರೆ ಈ ಸ್ಟೋರಿ ನೋಡಿ..
ಸಿಗ್ನಲ್ ಮಧ್ಯೆ ಕಾರು ಕೆಟ್ಟು ನಿಂತು ಹೋಗಿತ್ತು. ಹಿಂಬದಿಯಿಂದ ಬರುತ್ತಿದ್ದ ವಾಹನ ಚಾಲಕರೆಲ್ಲ ಇನ್ನೇನ್ನೋ ಹಾರ್ನ್ ಹೊಡೆದು ಶಬ್ದಶುರುವಿಟ್ಟುಕೊಂಡಿದ್ರು. ಪಾಪ ಕಾರು ಚಲಾಯಿಸುತ್ತಿದ್ದ ಮಹಿಳೆಗೆ ದಿಕ್ಕೇ ತೋಚದಂತಾಗಿತ್ತು. ಅಷ್ಟೊತ್ತಿಗಾಗಲೇ ಸಿಗ್ನಲ್ ಬಳಿ ಸುಡು ಬಿಸಿಲ ಲೆಕ್ಕಿಸದೇ ಟ್ರಾಫಿಕ್ ನಿಯಂತ್ರಿಸುತ್ತಿದ್ದ ಟ್ರಾಫಿಕ್ ಸಿಬ್ಬಂದಿಯೋರ್ವರು ನೇರಾ ಕಾರು ಬಳಿ ಬಂದು ಕಾರಿನ ಬೋನೆಟ್ ತೆಗೆದು ಪರಿಶೀಲಿಸಿದ್ರು. ಮಾತ್ರವಲ್ಲದೇ ಟ್ರಾಫಿಕ್ ನಿಯಂತ್ರಿಸೋ ಜೊತೆಗೆ ಕಾರನ್ನು ಸರಿಪಡಿಸಲು ಪ್ರಯತ್ನಿಸಿದ್ರು. ಆದ್ರೆ ಕಾರು ಸರಿ ಹೋಗಲ್ಲ ಎಂದು ತಿಳಿದಾಗ ಮಾತ್ರ ಸಿಗ್ನಲ್ ನಲ್ಲಿದ್ದ ಆ ಕಾರನ್ನು ತಾನೊಬ್ಬನೇ ತಳ್ಳಿ ಟ್ರಾಫಿಕ್ ನಿಂದ ತಹಬದಿಗೆ ತರುವಲ್ಲಿ ಸಹಕರಿಸಿ ಮಾನವೀಯತೆ ಮೆರೆದ್ರು. ಅಂದಹಾಗೆ ಈ ಘಟನೆ ನಡೆದಿದ್ದು ಸದಾ ಟ್ರಾಫಿಕ್ ನಿಂದ ತುಂಬಿತುಳುಕುವ ಮಂಗಳೂರು ನಗರದ ಹೃದಯಭಾಗವೆನಿಸಿಕೊಂಡಿರೋ ಲಾಲ್ ಬಾಗ್ ಜಂಕ್ಷನ್ ನಲ್ಲಿ. ಅಸಹಾಯಕ ಮಹಿಳೆಗೆ ಸಹರಿಸಿದ ಆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಾಂಡೇಶ್ವರದ ಸಿಬ್ಬಂದಿ ದೇರಣ್ಣ. ಇವರು ಮಾಡುತ್ತಿದ್ದ ಈ ಒಂದು ಒಳ್ಳೆಯ ಕೆಲಸವನ್ನು ದೂರದಿಂದಲೇ ವೀಕ್ಷಿಸುತ್ತಿದ್ದ ಹವ್ಯಾಸಿ ಛಾಯಾಚಿತ್ರಗ್ರಾಹಕ ಮೋಹನ್ ಕೋಟ್ಯಾನ್ ಸುರತ್ಕಲ್ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಮಾಧ್ಯಮಗಳ ಗಮನಕ್ಕೆ ತಂದಿದ್ದಾರೆ. ಸದಾ ಒಂದಿಲ್ಲೊಂದು ಮಾನವೀಯ ಕೆಲಸಗಳಿಂದ ಹೆಸ್ರು ಪಡೆಯುತ್ತಿರುವ ಮಂಗಳೂರು ನಗರ ಟ್ರಾಫಿಕ್ ಪೊಲೀಸರ ಸಾಲಿಗೆ ಇದೀಗ ದೇರಣ್ಣನವರು ಸೇರ್ಪಡೆಯಾಗಿದ್ದಾರೆ. ಇವರ ಈ ಮಾನವೀಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಒಟ್ಟಾರೆಯಾಗಿ ಪೊಲೀಸರು ಮಾನವೀಯತೆ ಇಲ್ಲದವರು ಎಂದು ದೂರುವ ಜನರೇ ಜಾಸ್ತಿ. ಪೊಲೀಸರಲ್ಲೂ ಮಾನವೀಯತೆ ಇದೆ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.

ನಾಗೇಶ್ ಕಾವೂರು

Related posts

Leave a Reply