Header Ads
Header Ads
Breaking News

ಟ್ರಾಫಿಕ್ ಹೆಡ್‌ಕಾನ್‌ಸ್ಟೇಬಲ್ ಬಾಬುಶೆಟ್ಟಿಗೆ ಸನ್ಮಾನ, ಮಂಗಳೂರಿನ ನಾಗರಿಕರ ಪರವಾಗಿ ಸಚಿವ ಖಾದರ್ ಅಭಿನಂದನೆ

ಸದಾ ಟ್ರಾಫಿಕ್‌ನಿಂದ ತುಂಬಿ ತುಳುಕುವ ಮಂಗಳೂರಿನ ನಂತೂರು ಜಂಕ್ಷನ್‌ನಲ್ಲಿ ಟ್ರಾಫಿಕ್ ನಿಯಂತ್ರಣದಲ್ಲಿ ಪ್ರಾಮಾಣಿಕ ಸೇವೆಗೈಯುತ್ತಿರುವ ಟ್ರಾಫಿಕ್ ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಬಾಬು ಶೆಟ್ಟಿಯವರನ್ನು ಮಂಗಳೂರು ನಾಗರಿಕರ ಪರವಾಗಿ ಆಹಾರ ಸಚಿವ ಯು. ಟಿ. ಖಾದರ್ ಅಭಿನಂದಿಸಿದರು.
ನಂತೂರು ಜಂಕ್ಷನ್‌ಗೆ ಆಗಮಿಸಿದ ಸಚಿವ ಖಾದರ್ ಕರ್ತವ್ಯನಿರತರಾಗಿದ್ದ ಬಾಬು ಶೆಟ್ಟಿಯವರಿಗೆ ಶಾಲು ಹೊದಿಸಿ, ಹೂಹಾರ ಹಾಕಿ ನಾಗರಿಕರ ಪರವಾಗಿ ಅಭಿನಂದಿಸಿದರು. ಕಳೆದ ೨೬ ವರುಷಗಳಿಂದ ಟ್ರಾಫಿಕ್ ಪೊಲೀಸ್ ಇಲಾಖೆಯಲ್ಲಿ ಸೇವಗೈಯುತ್ತಿರುವ ಬಾಬು ಶೆಟ್ಟಿಯವರ ಕರ್ತವ್ಯನಿಷ್ಠೆಗೆ ಸಚಿವ ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ನಾಗರಿಕರಾದ ಸುರೇಶ್ ಭಟ್ನಾಗರ್, ಶಿವಪ್ರಸಾದ್, ಅಬ್ದುಲ್ ರೆಹಮಾನ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply