Header Ads
Header Ads
Header Ads
Breaking News

ಠಾಣೆಯಿಂದ ವರ್ಗಾವಣೆಗೊಂಡ ಎಸ್.ಐ, ಸಿಬಂದಿಗಳಿಗೆ ಬೀಳ್ಕೊಡುಗೆ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾಭವನದಲ್ಲಿ ಆಯೋಜನೆ

 
 ಪುತ್ತೂರು ನಗರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಎಸ್.ಐ, ಸಿಬಂದಿಗಳಿಗೆ ಹಾಗೂ ಪ್ರೊಬೇಷನರಿ ಎಸ್.ಐಗಳಿಗೆ ಬೀಳ್ಕೊಡುಗೆ ಮಾಡಲಾಯಿತು. ಪುತ್ತೂರಿಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾದ ಎಸ್.ಐ ಮತ್ತು ಸಿಬಂದಿಗಳನ್ನು ಸ್ವಾಗತಿಸಿ ಅಭಿನಂದಿಸುವ ಸಮಾರಂಭವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಭಾಭವನದಲ್ಲಿ ನಡೆಯಿತು. ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್‌ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಪೊಲೀಸ್ ಸಿಬಂದಿಗಳ ಕಷ್ಟಸುಖದ ಕುರಿತು ಚೆನ್ನಾಗಿ ತಿಳಿದಿದೆ.

ಸಾರ್ವಜನಿಕ ಸ್ಥಳದಲ್ಲಿ ನಮ್ಮ ಸಿಬಂದಿಗಳಿಗೆ ಅವಮಾನ ಆಗಬಾರದು. ಹಾಗೆ ಒಂದು ವೇಳೆ ಆದರೆ ನಾನು ಸುಮ್ಮನೆ ಕೂರುವುದಿಲ್ಲ. ಒಳ ಅವಮಾನಕ್ಕೆ ಒಳಗಾಗಬೇಡಿ. ಅಪರಾಧ ನಿಯಂತ್ರಣ ಮಾಡಲು ನಮ್ಮ ಜೊತೆ ಹೆಗಲು ಕೊಡಿ ಎಂದು ಹೇಳಿದರು.ಈ ವೇಳೆ ಪುತ್ತೂರು ನಗರ ಸಂಚಾರ ಠಾಣೆಯ ಎಸ್.ಐ ಜಗದೀಶ್ ರೆಡ್ಡಿ , ಎಸ್.ಐ. ಓಮನ ಎನ್.ಕೆ. ವೇದಿಕೆಯಲ್ಲಿದ್ದರು. ಎ.ಎಸ್.ಐಗಳಾದ ಲೋಕನಾಥ್, ರುಕ್ಮಯ ಗೌಡ, ಜಯರಾಮ, ಉಮೇಶ್, ಪಾಂಡುರಂಗ, ಹೆಡ್‌ಕಾನ್‌ಸ್ಟೇಬಲ್ ಸ್ಕರೀಯ, ಕೃಷ್ಣಪ್ಪ, ನಾರಾಯಣ ಗೌಡ, ಪರಮೇಶ್ವರ, ಧನೇಶ್, ಸತೀಶ್, ಮಂಜುನಾಥ್, ಮತ್ತಿತರು ಉಪಸ್ಥತಿರಿದ್ರು.

Related posts

Leave a Reply