Header Ads
Header Ads
Breaking News

ಡಚ್ ಓಪನ್ ಜೂನಿಯರ್ ಸ್ಕ್ವಾಷ್, ಭಾರತದ ಅನನ್ಯಾ, ನೀಲ್ ಚಾಂಪಿಯನ್ಸ್

ಭಾರತದ ನೀಲ್ ಜೋಷಿ ಹಾಗೂ ಅನನ್ಯಾ ದಬ್ಕೆ ಅವರು ನೆದರ್ಲೆಂಡ್ಸ್ನಲ್ಲಿ ನಡೆದ ಡಚ್ ಓಪನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್ಷಿಪ್ನಲ್ಲಿ ಸೋಮವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಬಾಲಕರ ವಿಭಾಗದ ಫೈನಲ್ನಲ್ಲಿ ಮುಂಬೈ ಆಟಗಾರ ಜೋಷಿ ೯-೧೧, ೧೧-೪, ೧೧-೫, ೧೧-೬ರಲ್ಲಿ ಇಂಗ್ಲೆಂಡ್ನ ಖಲೀಲ್ ಅಲ್ಹಸನ್ ವಿರುದ್ಧ ಜಯ ದಾಖಲಿಸಿದರು. ಬಾಲಕಿಯರ ವಿಭಾಗದ ಫೈನಲ್ನಲ್ಲಿ ಅನನ್ಯಾ ೧೧-೭, ೧೧-೪, ೧೨-೧೦ರಲ್ಲಿ ಎರಡನೇ ಶ್ರೇಯಾಂಕದ ಅಮೆರಿಕದ ಆಟಗಾರ್ತಿ ಸೆರೆನಾ ಡೇನಿಯಲ್ಗೆ ಆಘಾತ ನೀಡಿದರು. ಅನನ್ಯಾ ಆರಂಭಿಕ ಸುತ್ತಿನಲ್ಲೇ ಅಮೆರಿಕದ ಸೋಫಿಯಾ ವಿರುದ್ಧ ಜಯ ದಾಖಲಿಸಿ ಅಚ್ಚರಿ ಮೂಡಿಸಿದ್ದರು.

Related posts

Leave a Reply