Header Ads
Header Ads
Breaking News

ಡಾ|ಎಂ.ವಿ.ಶೆಟ್ಟಿ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಲ್ಯಾಂಪ್ ಲೈಟಿಂಗ್ ಕಾರ್ಯಕ್ರಮ

ಮಂಗಳೂರಿನ ಕಾವೂರು ವಿದ್ಯಾನಗರದ ಡಾ|ಎಂ.ವಿ.ಶೆಟ್ಟಿ ಕಾಲೇಜ್ ಆಫ್ ನರ್ಸಿಂಗ್‌ನ 32ನೇ ಬಿ.ಎಸ್ಸಿ ನರ್ಸಿಂಗ್ ಬ್ಯಾಚ್ ಮತ್ತು 23ನೇ ಜಿಎನ್‌ಎಂ ಬ್ಯಾಚ್‌ನ ಲ್ಯಾಂಪ್ ಲೈಟಿಂಗ್ ಕಾರ್ಯಕ್ರಮವೂ ಕಾಲೇಜಿನ ಸಭಾಂಗಣದಲ್ಲಿ ಜರುಗಿತ್ತು.ಮಂಗಳೂರಿನ ಡಾ|ಎಂ.ವಿ.ಶೆಟ್ಟಿ ಕಾಲೇಜ್ ಆಫ್ ನರ್ಸಿಂಗ್‌ನ 32ನೇ ಬಿ.ಎಸ್ಸಿ ನರ್ಸಿಂಗ್ ಬ್ಯಾಚ್ ಮತ್ತು 23ನೇ ಜಿಎನ್‌ಎಂ ಬ್ಯಾಚ್‌ನ ಲ್ಯಾಂಪ್ ಲೈಟಿಂಗ್ ಕಾರ್ಯಕ್ರಮವೂ ಆಯೋಜಿಸಿದ್ದು, ಕಾರ್ಯಕ್ರಮವನ್ನು ತುಮಕೂರು ಸರ್ಕಾರಿ ಶುಶ್ರೂಷೆ ಶಾಲಾ ಉಪನ್ಯಾಸಕರಾದ ಡಾ| ಪ್ರಕಾಶ್ ಎಚ್.ಬಿ ಅವರು ಉದ್ಘಾಟಿಸಿದ್ರು. ಈ ವೇಳೆ ಮಾತನಾಡಿದ ಅವರು, ನರ್ಸಿಂಗ್ ಕ್ಷೇತ್ರದಲ್ಲಿಯೇ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ನರ್ಸಿಂಗ್ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಅದನ್ನ ಸದುಪಯೋಗಪಡಿಸಿಕೊಳ್ಳಬೇಕೆಂದರು ಬಳಿಕ ಡಾ|ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಡಾ| ರಂಜಿತ್ ಶೆಟ್ಟಿ ಮಾತನಾಡಿ ಅವ್ರು, ನರ್ಸಿಂಗ್ ಕ್ಷೇತ್ರದಲ್ಲಿ ತ್ಮಾಳೆ ಮತ್ತು ಉತ್ತಮ ಸ್ವಭಾವನ್ನು ಮೈಗೂಡಿಸಿಕೊಳ್ಳಬೇಕೆಂದರು.
ಈ ವೇಳೆ ಡಾ|ಎಂ.ವಿ.ಶೆಟ್ಟಿ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಪ್ರೋ|ಕ್ರಿಸ್ಟಿನ್ ಸಾಜು ವರ್ಕಿ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಕಾಲೇಜಿನ ಶಿಕ್ಷಕರು ಸೇರಿದಂತೆ ಉಪಸ್ಥಿತಿರಿದ್ದರು.

Related posts

Leave a Reply