Header Ads
Header Ads
Breaking News

ಡಾ. ಅಮ್ಮೆಂಬಳ ಬಾಳಪ್ಪರ 97ನೇ ಜನ್ಮದಿನಾಚರಣೆ

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ಆಶ್ರಯದಲ್ಲಿ ಸ್ವಾತಂತ್ರ್ಯಯೋಧ, ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಂಸ್ಥಾಕರಾದ ಡಾ. ಅಮ್ಮೆಂಬಳ ಬಾಳಪ್ಪ ಅವರ 97ನೇ ಜನ್ಮದಿನಾಚರಣೆಯ ಪ್ರಯುಕ್ತ ಸಮಾಜ ಸೇವಾ ಸಹಕಾರಿ ಸಂಭ್ರಮ ಬಂಟ್ವಾಳ ಬೈಪಾಸ್‌ನ ಸಮಾಜ ಸಹಕಾರಿ ಭವನದಲ್ಲಿ ನಡೆಯಿತು.


ಶ್ರೀ ಕ್ಷೇತ್ರ ಮುಳಿಯ ಇಲ್ಲಿನ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ದೀಪಪ್ರಜ್ವನೆಗೊಳಿಸಿದರು.ಈ ಸಂದರ್ಭ ಶಾಸಕ ರಾಜೇಶ್ ನಾಕ್ ಅವರು ಮಾತನಾಡಿ ಡಾ.ಅಮ್ಮೆಂಬಳ ಬಾಳಪ್ಪನವರು ಸಮಾಜದ ಕಟ್ಟಡ ಕಡೆಯ ಜನರಿಗೂ ಉಪಯೋಗವಾಗುವ ದೂರದೃಷ್ಟಿಯನ್ನಿಟ್ಟುಕೊಂಡು ಸಮಾಜ ಸೇವಾ ಸಹಕಾರಿ ಬ್ಯಾಂಕನ್ನು ಸ್ಥಾಪಿಸಿದರು. ಇಂದು ಬ್ಯಾಂಕ್ ಸಮಾಜದ ಜನರಿಗೆ ಉಪಯೀಗವಾಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು.
ಶ್ರೀ ಕ್ಷೇತ್ರ ಮುಳಿಯದ ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ರೋಗ ಬಂದ ಬಳಿಕ ಔಷಧಿ ಮಾಡುವ ಬದಲು ರೋಗ ಬಾರದಂತೆ ಮುಂಜಾಗೃತೆ ವಹಿಸುವುದು ಉತ್ತಮ, ನಮ್ಮ ನಿತ್ಯದ ಒತ್ತಡದ ಕೆಲಸಗಳ ಮಧ್ಯೆ ಆರೋಗ್ಯವಂತರಾಗಿ ಬದುಕುವುದೇ ಜೀವನದ ಸಾರ್ಥಕತೆ ಎಂದರು. ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕ್ ಆರ್ಥಿಕವಾಗಿ ಲಾಭ ಪಡೆಯುವುದರ ಜೊತೆಗೆ ಅದರ ಒಂದಂಶವನ್ನು ಸಮಾಜದ ಜನರಿಗಾಗಿ ವಿನಿಯೋಗಿಸ ಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬ್ಯಾಂಕ್‌ನ ಸಂಸ್ಥಾಪಕರಾದ ಡಾ. ಅಮ್ಮೆಂಬಳ ಬಾಳಪ್ಪರ ಆಶಯವೂ ಇದೇ ಆಗಿದ್ದು ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮದೊಂದಿಗೆ ಆರೋಗ್ಯ ಶಿಬಿರ, ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಗ್ರಾಮವಿಕಾಸ ಸಂಯೋಜಕ ಪ್ರವೀಣ್ ಸರಳಾಯ, ಪುತ್ತೂರಿನ ಪ್ರಶಾಂತಿ ಸದ್ಭಾವನ ಟ್ರಸ್ಟ್‌ನ ಎಂ.ಮಧುಸೂಧನ್ ನಾಯಕ್, ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜಿನ ಅಧ್ಯಾಪಕ ಚೆನ್ನಕೇಶವ ಡಿ.ಆರ್. ಬ್ಯಾಂಕಿನ ಉಪಾಧ್ಯಕ್ಷ ವಿಶ್ವನಾಥ ಕೆ.ಬಿ. ಉಪಸ್ಥಿತರಿದ್ದರು.
ಬಳಿಕ ಆರೋಗ್ಯ ತಪಾಸಣ ಶಿಬಿರ, ಯೋಗ, ಮುದ್ರಾ ಶಿಬಿರ, ಸ್ವಸಹಾಯ ಸಂಘಗಳ ಸಮಾವೇಶ, ವಿದ್ಯಾರ್ಥಿ ವೇತನ ವಿತರಣೆ, ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.

Related posts

Leave a Reply

Your email address will not be published. Required fields are marked *