Header Ads
Header Ads
Breaking News

ಡಾ.ಎಂ.ಎಸ್.ಎಂ.ಝೈನಿ ಸಖಾಫಿಯವರಿಗೆ ಗೌರವಾರ್ಪಣೆ

ಮದರಂಗಿ ಕನ್ನಡ ಮಾಸ ಪತ್ರಿಕೆ ವತಿಯಿಂದ ಡಾ.ಎಂ.ಎಸ್.ಎಂ.ಝೈನಿ ಸಖಾಪಿಯವರಿಗೆ ಗೌರವಾರ್ಪಣೆ ಹಾಗೂ ಈದ್ ಮೀಲಾದ್ ಲೇಖನ ಸ್ಪರ್ದೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಮಂಗಳೂರಿನ ನಡೆಯಿತು.

ಕಾರ್ಯಕ್ರಮವು ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿರುವ ರೀಗಲ್ ಪ್ಲಾಝಾ ಕಟ್ಟಡದ ಎರಡನೇ ಮಹಡಿಯಲ್ಲಿರುವ ಸುನ್ನಿ ಜಮಿಯತ್ತುಲ್ ಉಲಾಮ ಕಛೇರಿಯಲ್ಲಿ ನಡೆಯಿತು.

ಕಾರ್ಯಕ್ರದಲ್ಲಿ ಅಝಾದ್ ಗ್ರೂಪ್ ಮಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಹಾಜಿ ಮನ್ಸೂರ್ ಅಹ್ಮದ್ ಉದ್ಘಾಟಕರಾಗಿ ಮಾತನಾಡಿ ಡಾ.ಎಂ.ಎಸ್.ಎಂ.ಝೈನಿ ಸಖಾಫಿಯವರಿಗೆ ಡಾಕ್ಟರೇಟ್ ಸಿಕ್ಕಿರುವುದು ನಮಗೆ ಮತ್ತು ನಮ್ನ ಸಮುದಾಯಕ್ಕೆ ಸಂತೋಷದ ವಿಚಾರ. ಈ ಡಾಕ್ಟರೇಟ್ ಪದವಿಗೆ ಅವರು ನಿಜವಾಗಿಯೂ ಅರ್ಹರು ಅವರ ಪಾಂಡಿತ್ಯ ಅಂತಹದು ಮತ್ತು ಇವರಿಗೆ ೧೦ ವರ್ಷಗಳ ಹಿಂದೆಯೇ ಸಿಗಬೇಕಿತ್ತು ಎಂದು ಹೇಳಿದರು.

ಬಳಿಕ ಕಣಚೂರು ಸಮೂಹ ಸಂಸ್ಥೆಗಳ ಡೈರೆಕ್ಟರ್ ಅಬ್ದುರ್ರಹ್ಮಾನ್ ಕಣಚೂರು ಮಾತನಾಡಿ ಮದರಂಗಿ ಕನ್ನಡ ಮಾಸಿಕ ಪತ್ರಿಕೆಯವರು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ನಮ್ಮ ಸಮುದಾಯದ ಹೆಣ್ಣುಮಕ್ಕಳು ಬಹುಮಾನವನ್ನು ಪಡೆದುಕೊಂಡಿದ್ದಾರೆ ಇದು ಸಂತೋಷದ ವಿಚಾರ ಮತ್ತು ನಮ್ಮ ಸಮುದಾಯದ ಹೆಣ್ಣು ಮಕ್ಕಳು ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಮತ್ತು ಹೆಚ್ಚು ವಿದ್ಯಾಭ್ಯಾಸವನ್ನು ಮಾಡಬೆಕು ಎಂದು ಹೇಳಿದರು.

ಈ ವೇಳೆ ’ಮೈಂಡ್ ಆಂಡ್ ಸ್ಪಿರುಚುವಾಲಿಟಿ’ ಎಂಬ ವಿಷಯದಲ್ಲಿ ಕೊಲಂಬೋ ಡಾಕ್ಟರೇಟ್ ಪಡೆದುಕೊಂಡು ಬಂದ ಡಾ.ಎಂ.ಎಸ್.ಎಂ.ಝೈನಿ ಸಖಾಫಿಯವರಿಗೆ ಮದರಂಗಿ ಕನ್ನಡ ಮಾಸ ಪತ್ರಿಕೆ ಮತ್ತು ಕಣಚೂರು ಸಮೂಹ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಬಳಿಕ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮದರಂಗಿ ಕನ್ನಡ ಮಾಸ ಪತ್ರಿಕೆಯ ಸಂಪಾದಕರಾದ ಕೆ.ಎ.ಅಬ್ದುಲ್ ಅಝೀಝ್ ಪುಣಚ, ಯುವ ಲೇಖಕ ಮಹಮ್ಮದ್ ಇಸ್ಮತ್ ನಜೀರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪವನ್ ಕಾಜಿಮಡ್ಕ

Related posts

Leave a Reply