Header Ads
Header Ads
Header Ads
Header Ads
Header Ads
Header Ads
Breaking News

ಡಾ.ಎನ್‌ಎಸ್‌ಎಎಮ್ ಪಿಯು ಕಾಲೇಜು: ಎನ್‌ ಎಸ್‌ ಎಸ್ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಮಂಗಳೂರಿನ ನಂತೂರಿನಲ್ಲಿರುವ ಡಾ. ನಿಟ್ಟೆ ಶಂಕರ್ ಅಡ್ಯಂತಾಯ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

 ಸ್ವಚ್ಛ ಭಾರತದ ಕನಸು ನನಸಾಗುವ ಉದ್ದೇಶದಿಂದ ಡಾ.ಎನ್‌ಎಸ್‌ಎಎಮ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಈ ಬಗ್ಗೆ ಎನ್‌ಎಸ್‌ಎಸ್ ಘಟಕದ ಪದಾಧಿಕಾರಿ ಸಂಧ್ಯಾ ಎಮ್ ಅವರು ಮಾತನಾಡಿ, ನಮ್ಮ ಕಾಲೇಜಿನಲ್ಲಿ ಒಂದು ದಿನದ ಶ್ರಮದಾನವನ್ನು ಹಮ್ಮಿಕೊಂಡಿದ್ದೇವೆ. ಡೆಂಗ್ಯೂ, ಮಲೇರಿಯಾ ತಡೆಗಟ್ಟುವಿಕೆ ಮತ್ತು ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
 ಆನಂತರ ಎನ್‌ಎಸ್‌ಎಸ್ ಘಟಕದ ಕಾರ್ಯದರ್ಶಿ ಶ್ವೇತಾ ಅವರು ಮಾತನಾಡಿ, ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ರೋಗಮುಕ್ತವಾಗಿಸುವ ಉದ್ದೇಶದಿಂದ ಒಂದು ದಿನದ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಎನ್‌ಎಸ್‌ಎಸ್ ಪದಾಧಿಕಾರಿ ಡಾ. ಮೋಹನ್, ಸಹಾಯಕ ಪದಾಧಿಕಾರಿ ದಿವ್ಯಾ ಬಿ. ವಿದ್ಯಾಧರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಶರತ್ ಮಂಗಳೂರು

Related posts

Leave a Reply

Your email address will not be published. Required fields are marked *