Header Ads
Header Ads
Header Ads
Breaking News

ಡಾ| ಎ. ರಂಜಿತ್ ಕುಮಾರ್ ಶೆಟ್ಟಿಯವರ ‘ನೆನಪಿನಾಳದಿಂದ’ ಪುಸ್ತಕ ಬಿಡುಗಡೆ : ಕುಂದಾಪುರದ ಭಂಡಾರ್‌ಕಾರ್‍ಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ

ಕುಂದಾಪುರ: ಡಾ. ರಂಜಿತ್ ಶೆಟ್ಟಿಯವರ ಜಯಂತಣ್ಣನಿಗಾಗಿ ಕಾದಂಬರಿಯನ್ನಿಟ್ಟುಕೊಂಡು ಒಂದೊಳ್ಳೆ ಸಿನೆಮಾ ಮಾಡಲು ಮನಸ್ಸು ಮಾಡಿದ್ದೇನೆ. ಜಯಂತಣ್ಣನಿಗಾಗಿ ಕಾದಂಬರಿಯನ್ನು ನಾನು ರಂಜಿತಣ್ಣನಿಗಾಗಿ ಸಿನೆಮಾ ಮಾಡುವೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.

ಅವರು ಕುಂದಾಪುರದ ಭಂಡಾರ್‌ಕಾರ್‍ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಕುಂದಪ್ರಭ ಸಹಯೋಗದಲ್ಲಿ ನಡೆದ ಡಾ| ಎ. ರಂಜಿತ್ ಕುಮಾರ್ ಶೆಟ್ಟಿಯವರ ‘ನೆನಪಿನಾಳದಿಂದ’ ಪುಸ್ತಕವನ್ನು ಜಾದೂಗಾರ ಓಂಗಣೇಶ್ ಉಪ್ಪುಂದ ಅವರ ಸಹಕಾರದೊಂದಿಗೆ ವಿಶಿಷ್ಟ ರೀತಿಯಲ್ಲಿ ಬಿಡುಗಡೆ ಬಿಡುಗಡೆಗೊಳಿಸಿ, ಹುಟ್ಟೂರ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಡಾ. ರಂಜಿತ್ ಶೆಟ್ಟಿಯವರ ಜಯಂತಣ್ಣನಿಗಾಗಿ ಕಾದಂಬರಿ ಒಂದು ಅದ್ಭುತ ಕತೆಯಾಗಿದೆ. ಕನ್ನಡದಲ್ಲಿ ಪ್ರಮುಖವಾಗಿ ವೈದ್ಯರ ಅನುಭವ, ಸವಾಲುಗಳು, ಅವರ ಜೀವನವನ್ನಿಟ್ಟುಕೊಂಡು ಮಾಡಿರುವ ಸಿನೆಮಾಗಳು ಬಹಳ ಕಡಿಮೆ. ಕೆಲವು ಸಿನೆಮಾಗಳಿದ್ದರೂ ಕೂಡ ಸಣ್ಣ ಸಣ್ಣ ಪಾತ್ರಗಳಲ್ಲಿ, ದುರಂತ ಕತೆಗಳಲ್ಲಿ ಬಂದಿ ಹೋಗಿದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ವಿದ್ಯಾರ್ಥಿ ಜೀವನದಿಂದ ಅವನ ಕೊನೆವರಿಗಿನ ಜರ್ನಿ ಹೇಳಿದಂತಹ ಯಾವ ಸಿನೆಮಾವೂ ಬಂದಿಲ್ಲ. ಜಯಂತಣ್ಣನಿಗಾಗಿ ಪುಸ್ತದಲ್ಲಿ ಓದಿರುವ ವಿಚಾರಗಳನ್ನು ಮೀರಿದ ಇನ್ನಷ್ಟು ವಿಚಾರಗಳು ಸಿನೆಮಾದಲ್ಲಿ ತೋರಿಸಲು ಪ್ರಯತ್ನಿಸುವೆ ಎಂದು ಹೇಳಿದರು.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಯಂತಣ್ಣನಿಗಾಗಿ ಕಾದಂಬರಿಯ ದ್ವಿತೀಯ ಮುದ್ರಣವನ್ನು ಕೂಡ ಅನಾವರಗೊಳಿಸಲಾಯಿತು. ಈ ಸಂದರ್ಭ ಪ್ರೊ| ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *