Header Ads
Breaking News

ಡಾ. ಎ ಸುಬ್ಬರಾವ್ ಜನ್ಮ ಶತಾಬ್ಧಿ ಆಚರಣೆ : ಫೆ.9ರಂದು ನಡೆಯಲಿರುವ ಸಮಾರೋಪ ಸಮ್ಮೇಳನ

ಮಂಜೇಶ್ವರ: ಸ್ವಾತಂತ್ರ್ಯ ಹೋರಾಟಗರ, ಉತ್ತರ ಮಲಬಾರಿನಲ್ಲಿ ಕಮ್ಯುನಿಸ್ಟ್ ಪಕ್ಷ ಕಟ್ಟಿ ಬೆಳೆಸುವಲ್ಲಿ ಸುಪ್ರಧಾನ ಪಾತ್ರ ನಿರ್ವಹಿಸಿದ ಮಜಿ ರಾಜ್ಯ ಸಭಾ ಸದಸ್ಯ, ಕೇರಳದ ಮಜಿ ಸಚಿವ, ಮಾಜಿ ಶಾಸಕ ಹಾಗೂ ಪ್ರತ್ಯೇಕವಾಗಿ ತುಳುನಾಡಿನ ಹೆಮ್ಮೆಯ ಮೌಲ್ಯಾಧಾರಿತ ರಾಜಕೀಯ ಸಿದ್ದಂತವನ್ನು ನಿಸ್ವಾರ್ಥೆಯಿಂದ ಸಾಮಾಜಿಕ ರಂಗದಲ್ಲಿ ಅಳವಡಿಸಿಕೊಂಡ ಡಾ. ಎ. ಸುಬ್ಬರಾವ್ ರವರ ಜನ್ಮಶತಾಭ್ದಿ ಆಚರಣೆಯ ಸಮಾರೋಪ ಸಮ್ಮೆಳನ ಫೆಬ್ರವರಿ 9ರಂದು ಮಂಜೇಶ್ವರದ ಹೊಸಂಗಡಿಯಲ್ಲಿ ನಡೆಯಲಿರುವುದಾಗಿ ಸಂಘಟಕ ಸಮಿತಿ ಚೇಯರ್ ಮ್ಯಾನ್ ಬಿ ವಿ ರಾಜನ್ ತಿಳಿಸಿದ್ದಾರೆ.

ಅವರು ಮಂಜೇಶ್ವರ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಸಿಪಿಐ ದೇಶೀಯ ನಿಯಂತ್ರಕ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸತ್ ಸದಸ್ಯ ಪನ್ಯನ್ ರವೀಂದ್ರನ್ ಸಮ್ಮೆಳನವನ್ನು ಉದ್ಘಾಟಿಸಲಿದ್ದಾರೆ. ಕೇರಳ ಕಂದಾಯ ಸಚಿವ ಇ ಚಂದ್ರಶೇಖರ್ ಹಾಗೂ ಸಿಪಿಐ ರಾಜ್ಯ ನಿಯಂತ್ರಕ ಸಮಿತಿ ಅಧ್ಯಕ್ಷ ಸಿ ಪಿ ಮುರಳಿ ಸುಬ್ಬರಾವ್ ರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭ ಡಾ. ಬನಾರಿಯವರು ರಚಿಸಿದ “ಶತಮಾನ ಶ್ರದ್ದಾಂಜಲಿ: ಎಂಬ ಕವಿತೆಯ ಬಿಡುಗಡೆ ಹಾಗೂ ವಾಚನ ನಡೆಯಲಿದೆ ಎಂದು ಮಾಹಿತಿಯನ್ನು ನೀಡಿದ್ದರು.ಈ ಸಂದರ್ಭ ವೇದಿಕೆಯಲ್ಲಿ ನೇತಾರರಾದ ಗೋವಿಂದನ್ ಪಳ್ಳಿಕಾಪಿಲ್, ಟಿ ಕ್ರಷ್ಣನ್, ಬಂಗಳಂ ಪಿ. ಕುಂಞ ಕ್ರಷ್ಣನ್, ಕೆ ವಿ ಕ್ರಷ್ಣನ್, ಭಾರ್ಗವಿ ವಿಜಯ ಕುಮಾರ್ ಜಯರಾಂ ಬಲ್ಲಂಗುಡೇಲ್, ಅಜಿತ್ ಎಂ ಸಿ, ರಾಮಕ್ರಷ್ಣ ಕಡಂಬಾರ್, ಮುಸ್ತಫಾ ಎಂ ಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥತರಿರುವರು ಎಂದರು.

Related posts

Leave a Reply

Your email address will not be published. Required fields are marked *