Header Ads
Header Ads
Breaking News

ಡಾ. ಕುರುಂಜಿ ವೆಂಕಟ್ರಮಣಗೌಡರ 90ನೇ ವರ್ಷದ ಜಯಂತ್ಯೋತ್ಸವ :ಮೀನಾಕ್ಷಿ ಗೌಡ, ಸಂಪಾಜೆ ಶೀನಪ್ಪರೈಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ಪ್ರಧಾನ

ಸುಳ್ಯದ ಅಮರಶಿಲ್ಪಿ, ಅಭಿವೃದ್ಧಿ ಹರಿಕಾರ ಡಾ. ಕುರುಂಜಿ ವೆಂಕಟ್ರಮಣಗೌಡರ ೯೦ನೇ ವರ್ಷದ ಜಯಂತ್ಯೋತ್ಸವ ಅಂಗವಾಗಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ಕೆವಿಜಿ ಸುಳ್ಯ ಹಬ್ಬದ ಅಂಗವಾಗಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಕೆವಿಜಿ ಸಾಧನಾಶ್ರೀ ಪ್ರಶಸ್ತಿಯನ್ನು ಸಮಾಜ ಸೇವಾ ಕ್ಷೇತ್ರದ ಎಂ. ಮೀನಾಕ್ಷಿಗೌಡ ಮತ್ತು ಯಕ್ಷಗಾನಕ್ಷೇತ್ರದ ಸಾಧಕ ಸಂಪಾಜೆ ಶೀನಪ್ಪ ರೈಯವರಿಗೆ ಪ್ರದಾನ ಮಾಡಲಾಯಿತು. ಚಂದ್ರಶೇಖರ ಪೇರಾಲು ಮತ್ತು ಬೇಬಿವಿದ್ಯಾ ಪ್ರಶಸ್ತಿ ಪತ್ರವಾಚಿಸಿದರು.


ಜಿಲ್ಲಾ ಪರಿಷತ್ ಮಾಜಿ ಸದಸ್ಯ ಭರತ ಮುಂಡೋಡಿ, ಡಾ.ಕುರುಂಜಿಯವರ ಶಿಕ್ಷಣದ ಕ್ರಾಂತಿಯಿಂದ ಹಳ್ಳಿ-ಹಳ್ಳಿ ಅಭಿವೃದ್ಧಿಪತದತ್ತ ಸಾಗಲು ಕಾರಣವಾಯಿತು ಎಂದು ಕೆವಿಜಿ ಸಂಸ್ಮರಣಾ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ವಹಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ಸುಳ್ಯ ಶ್ರೀಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ಭಾಗವಹಿಸಿದರು.
ವೇದಿಕೆಯಲ್ಲಿ ಸುಳ್ಯ ಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ವಿಶ್ವನಾಥ್, ಸಂಚಾಲಕ ಭವಾನಿಶಂಕರ ಅಡ್ತಲೆ, ಕೋಶಾಧಿಕಾರಿ ಚಂದ್ರಾಕ್ಷಿ ಜೆ. ರೈ, ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.


ಸಭಾಕಾರ್ಯಕ್ರಮದ ಮೊದಲು ಖ್ಯಾತ ಗಾಯಕ ಕೆ.ಆರ್.ಗೋಪಾಲಕೃಷ್ಣ ನೇತೃತ್ವದಲ್ಲಿ ಕುರುಂಜಿ ಗೀತ ಗಾಯನ ಸಂಗೀತ ಕಾರ್ಯಕ್ರಮ ನಡೆಯಿತು.
ಕುದ್ರೋಳಿ ಗಣೇಶ್ ಮತ್ತು ತಂಡದಿಂದ ಮೆಗಾ ಮ್ಯಾಜಿಕ್ ಸ್ಟಾರ್ ವಿಸ್ಮಯ ಜಾದೂ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.

Related posts

Leave a Reply