Header Ads
Breaking News

ಡಾ.ಜಯಂತ ಆಠವಲೆಯವರ 77ನೇ ಜನ್ಮೋತ್ಸವದ ನಿಮಿತ್ತ ಹಿಂದೂ ಏಕತಾ ಮೆರವಣಿಗೆ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ 77ನೇ ಜನ್ಮೋತ್ಸವ ನಿಮಿತ್ತ ಹಿಂದೂ ಐಕ್ಯತೆ ಮೆರವಣಿಗೆಯು ಇಂದು ಜ್ಯೋತಿ ವೃತ್ತದಿಂದ ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾಗಿ ಮೆರವಣಿಗೆಯ ಮೂಲಕ ಪುರಭವನದಲ್ಲಿ ಸಮಾರೂಪ ಕಾರ್ಯಕ್ರಮದಿಂದ ಮುಕ್ತಾಯವಾಯಿತು. ಮೆರವಣೆಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಮೆರವಣಿಗೆಯಲ್ಲಿ ಇಸ್ಕಾನ್ ಸಂಸ್ಥೆ, ಶ್ರೀರಾಮ ಸೇನೆ, ನವಜೀವನ ವ್ಯಾಯಾಮ ಶಾಲೆ ಮಾರ್ನಬೈಲ್ , ಖಾವಂತಾಯ ಗೆಳೆಯರು ಮಾರ್ನಬೈಲು, ಚಿರಂಜೀವಿ ಯುವಕ ಮಂಡಳಿಯ ಕಾರ್ಯಕರ್ತರು ಮತ್ತು ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಉಪಸ್ಥಿತಿತರಿದ್ದರು. ಈ ಸಂದರ್ಭ ನ್ಯಾಯವಾದಿಗಳಾದ ಶ್ರೀ.ಚಂದ್ರಶೇಖರ್ ರಾವ್, ಚಂದ್ರಮೊಗೇರ್ ಲಕ್ಷ್ಮೀ ಪೈ, ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯರು ಹಾಗೂ ಮತ್ತಿತರರು ಉಪಸ್ಥಿತಿದ್ರು.

Related posts

Leave a Reply

Your email address will not be published. Required fields are marked *