Header Ads
Header Ads
Breaking News

ಡಾ. ಜಯಮಾಲಾರಿಂದ ಕಾರ್ಕಳದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಕಾರ್ಕಳದ ಬಂಡೀಮಠ ಬಸ್ ನಿಲ್ದಾಣ ಪರಿಸರದಲ್ಲಿ ಇಂದಿರಾಗಾಂಧಿ ಕ್ಯಾಂಟೀನ್ ಅನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತಮಾಡಿದ ಅವರು ಇದರಿಂದ ರಾಜ್ಯದ ಒಂದು ಲಕ್ಷ ೪೦ಸಾವಿರ ಜನರಿಗೆ ಉಪಯೋಗವಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು4 ಕ್ಯಾಂಟೀನ್‌ಗಳನ್ನು ತೆರಯಲಾಗುತ್ತಿದ್ದು ಕುಂದಾಪುರ, ಕಾರ್ಕಳ ತಲಾ ಒಂದರಂತೆ ಹಾಗೂ ಉಡುಪಿ ಜಿಲ್ಲೆಗೆ ೨ ಕ್ಯಾಂಟಿನ್ ತೆರಯಲಾಗುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು. ಶಾಸಕ ವಿ.ಸುನಿಲ್ ಕುಮಾರ್‌ರವರು ಮಾತನಾಡಿ ಕಳೆದ ಆರೇಳು ತಿಂಗಳಲ್ಲಿ ಆರಂಭವಾಗಬೇಕಿದ್ದ ಕ್ಯಾಂಟೀನ್ ಇದೀಗ ಉದ್ಘಾಟನೆಗೊಳ್ಳುತ್ತಿರುವುದು ಸಂತಸದ ಸಂಗತಿ. ದಿನಕ್ಕೆ300ಮಂದಿಗೆ ಉಣಬಡಿಸುವ ಕ್ಯಾಂಟೀನ್‌ನ ಫಲಪ್ರದ ಯೋಜನೆ ಸಾಕಾರಗೊಳ್ಳಲಿ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾಪುರ ಸಹಾಯಕ ಕಮೀಶನರ್ ಭೂಬಾಲನ್, ಯೋಜನಾ ನಿರ್ದೇಶಕ ಅರುಣಾ ಪ್ರಭಾ, ಮುಖ್ಯಾಧಿಕಾರಿ ಮೇಬಲ್ ಡಿಸೋಜಾ, ಪರಿಸರ ಅಭಿಯಂತರ ಮದನ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply