Header Ads
Header Ads
Header Ads
Breaking News

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನಿಸಿದ ವಿಚಾರ : ದಲಿತ ಮುಖಂಡ ಜಯನ್ ಮಲ್ಪೆ ಆಕ್ರೋಶ

ಕುಂದಾಪುರ: ಬಹಳ ಹಿಂದಿನಿಂದಲೂ ಆರೆಸ್ಸೆಸ್ ಈ ದೇಶಕ್ಕೆ ಸಂವಿಧಾನ ನೀಡಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಇತಿಹಾಸದ ಪುಟಗಳಲ್ಲಿ ಅಂಬೇಡ್ಕರ್ ಅವರ ಹೆಸರನ್ನು ನಾಶ ಮಾಡಿದರೆ ಮಾತ್ರ ತಾವು ಬದುಕಬಹುದೆಂಬ ತಂತ್ರ ಮನುವಾದಿಗಳಲ್ಲಿದೆ. ಆದರೆ ಈ ನೆಲದಲ್ಲಿ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಯಾರು ಒಪ್ಪುವುದಿಲ್ಲವೋ ಅವರು ಕೂಡಲೇ ಈ ದೇಶ ಬಿಟ್ಟು ತೊಲಗಲಿ ಎಂದು ದಲಿತ ಮುಖಂಡ ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು.

ಅವರು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನಿಸಿದ ರಾಜ್ಯ ಸರ್ಕಾರದ ವಿರುದ್ದ ಕುಂದಾಪುರ ತಾಲೂಕು ಪಂಚಾಯತ್ ಎದುರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ನ್ಯಾಯವಾದಿ ವಿಕಾಸ್ ಹೆಗ್ಡೆ ಮಾತನಾಡಿ, ಈ ದೇಶದಲ್ಲಿರುವ ೧೩೦ಕೋಟಿ ಜನರಿಗೂ ಇರುವ ಏಕೈಕ ಪವಿತ್ರ ಗ್ರಂಥ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನ. ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಒಪ್ಪಲಿಕ್ಕೆ ಈ ಮನುವಾದಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಂತ ಹಂತವಾಗಿ ಸಂವಿಧಾನವನ್ನು ತಿರುಚುವ ಮೂಲಕ ಅಂಬೇಡ್ಕರ್ ಹೆಸರನ್ನು ನಾಶ ಮಾಡುವ ಹೀನ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ ಎಂದರು.

ಪ್ರಗತಿಪರ ಚಿಂಕತ ಶಶಿಧರ ಹೆಮ್ಮಾಡಿ ಮಾತನಾಡಿ, ಈಗಾಗಲೇ ಗುಜರಾತ್ ರಾಜ್ಯದ ಶಾಲೆಗಳಲ್ಲಿ ಅಂಬೇಡ್ಕರ್ ಅವರ ಪುಸ್ತಕಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಗುಜರಾತ್‌ನಲ್ಲಿರುವ ಗ್ರಂಥಾಲಯಗಳಲ್ಲೂ ಅಂಬೇಡ್ಕರ್ ಅವರ ಬಗೆಗಿನ ಪುಸ್ತಕಗಳನ್ನು ತೆಗೆದುಹಾಕಲಾಗಿದೆ. ಹಂತ ಹಂತವಾಗಿ ಅಂಬೇಡ್ಕರ್ ಹೆಸರನ್ನು ಈ ದೇಶದ ಜನರ ಮನಸ್ಸಿನಿಂದ, ಶಿಕ್ಷಣ ವ್ಯವಸ್ಥೆಯಿಂದ ಮರೆಮಾಚುತ್ತಾ ಬಂದಿರುವ ಇವರ ಮನುಸ್ಮೃತಿಯನ್ನು, ಮನುವಾದನ್ನು ನಾವೆಲ್ಲರೂ ಒಪ್ಪಿಕೊಳ್ಳುವಂತಹ ಪರಿಸ್ಥಿತಿಗೆ ನಮ್ಮನ್ನು ತಳ್ಳಲಾಗುತ್ತಿದೆ ಎಂದರು.

ದಸಂಸ ಜಿಲ್ಲಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು ಶ್ರೀಧರ್ ಪಿಎಸ್, ಶಾಜಿ ಅಬ್ರಹಾಂ, ನ್ಯಾಯವಾದಿ ಇಲಿಯಾಸ್, ದಸಂಸ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಮುಖಂಡರಾದ ಹರೀಶ್ ಮಲ್ಪೆ, ಸುಂದರ ಕಪ್ಪೆಟ್ಟು, ಗಣೇಶ್ ನೇರ್ಗಿ, ಪ್ರದೀಪ್ ಗಿಳಿಯಾರು, ರಾಘವೇಂದ್ರ, ಕುಮಾರ್ ಕೋಟ, ರವಿ ಸುಣ್ಣಾರಿ, ಗೀತಾ, ವಾಸು ನೇಜಾರು, ಸುರೇಶ್ ಬಾರ್ಕೂರು ಮೊದಲಾದವರು ಪ್ರತಿಭಟನೆಯಲ್ಲಿ ಹಾಜರಿದ್ದರು.

Related posts

Leave a Reply

Your email address will not be published. Required fields are marked *