Header Ads
Breaking News

ಡಾ. ಬಿ.ಆರ್ ಅಂಬೇಡ್ಕರ್ 130ನೇ ಜನ್ಮದಿನಾಚರಣೆ ಪ್ರಯುಕ್ತ ಕ್ರೀಡಾಕೂಟ

ವಿಟ್ಲ: ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಘಟಕ, ದಲಿತ್ ಸೇವಾ ಸಮಿತಿ ವಿದ್ಯಾರ್ಥಿ ಸಂಘಟನೆ ಮತ್ತು ಬಂಟ್ವಾಳ, ಸುಳ್ಯ, ಪುತ್ತೂರು, ಕಡಬ, ಮಂಗಳೂರು, ಉಳ್ಳಾಲ ವಲಯ, ಪಾಣೆಮಂಗಳೂರು ಹೋಬಳಿ ಶಾಖೆ ಹಾಗೂ ಎಲ್ಲಾ ಗ್ರಾಮ ಶಾಖೆಗಳ ಜಂಟಿ ಆಶ್ರಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 130ನೇ ಜನ್ಮದಿನಾಚರಣೆ ಪ್ರಯುಕ್ತ ಕ್ರೀಡಾಕೂಟ ವಿಟ್ಲ ಸರ್ಕಾರಿ ಶಾಲೆಯಲ್ಲಿ ನಡೆಯಿತು.ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಅವರು ಕ್ರೀಡೆ ಮಾನಸಿಕ ಮತ್ತು ದೈಹಿಕ ಸಾಮಾರ್ಥ್ಯವನ್ನು ಹೆಚ್ಚುಸುತ್ತದೆ. ನಿರಂತರ ಪರಿಶ್ರಮ ಹಾಗೂ ಗುರಿ ಇಟ್ಟುಕೊಂಡಾಗ ಯಶಸ್ಸು ಸಾಧ್ಯವಾಗುತ್ತದೆ. ಮನೋಭಾವನೆ ಇಟ್ಟುಕೊಂಡು ಮುನ್ನಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಮಾತನಾಡಿ ಕ್ರೀಡಾಕೂಟಗಳ ಮೂಲಕ ಒಗ್ಗಟ್ಟು ಸಾಧ್ಯ. ಎಲ್ಲರನ್ನೂ ಒಗ್ಗೂಟಿಸಿಕೊಂಡು ಮುಂದೆ ಸಾಗಲು ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದರು.ಬಂಟ್ವಾಳ ಬಿ ಎಸ್ ಎನ್ ಎಲ್ ನೌಕರ ದೇವದಾಸ ಕೃಷ್ಣಾಪುರ ಅಮ್ಟೂರು, ಬಂಟ್ವಾಳ ನಳಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಕೆ ಕಡಂಬು, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ದಲಿತ್ ಸೇವಾ ಸಮಿತಿ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಮಂಗಳೂರು ಶಾಖೆ ಗೌರವಾಧ್ಯಕ್ಷೆ ರೇಣುಕಾ, ಲಲಿತಾ ಸಾಲೆತ್ತೂರು, ಚಂದ್ರಶೇಖರ್ ಯು, ಪ್ರಸಾದ್ ಅನಂತಾಡಿ ಮತ್ತು ಪ್ರಸಾದ್ ಬೊಳ್ಮಾರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *